ಬೆಂಗಳೂರೂ : ಬಿಜೆಪಿಯ ಶಾಸಕ ಗೋಪಾಲಯಗೆ ಕೊಲೆ ಬೆದರಿಕೆ ಒಡ್ಡಿದ್ದು ಕೊಲೆ ಬೆದರಿಕೆಗೆ ಸಂಬಂಧಸಿದಂತೆ ಇದೀಗ ಮಾಜಿ ಕಾರ್ಪೊರೇಟರ್ ಪದ್ಮನಾಭ ವಿರುದ್ಧ ಎಫ್ಐಆರ್ ದಾಖಲಾಗಿದೆ ಅಲ್ಲದೆ ಗೋಪಾಲಯ್ಯ ಕೂಡ ಸ್ಪೀಕರ್ ಯುಟಿ ಖಾದರ್ ಗೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅವನಿ ಹೀಗೆ ಏನೆಲ್ಲ ಕೆಲಸ ಮಾಡಿ ಕೊಟ್ಟಿದ್ದೇನೆ. ಅವರ ಮಕ್ಕಳಿಗೆ ಕೆಲಸ ಕೊಡಿಸುವುದಾಗಿರಬಹುದು ಅಥವಾ ಮೆಡಿಕಲ್ ಸೀಟ್ ಕೊಡಿಸುವುದಾಗಿರಬಹುದು ಅಲ್ಲದೆ ಹಲವಾರು ಕೆಲಸ ಮಾಡಿದ್ದೇನೆ. ಆದರೂ ನನಗೆ ಕೊಲೆ ಬೆದರಿಕೆ ಹಾಕಿದ್ದಾನೆ. ನನಗೆ ಅಷ್ಟೇ ಅಲ್ಲದೆ ಹಲವು ಶಾಸಕರಿಗೂ ಕೂಡ ಆತ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದರು.
ವಿಷಯ ತಿಳಿದು ಪದ್ಮರಾಜು ಮನೆಯವರು ಕರೆ ಮಾಡಿ ಕುಡಿದ ಅಮಲಿನಲ್ಲಿ ಏನೋ ಹೇಳಿದ್ದಾರೆ ದಯವಿಟ್ಟು ಕ್ಷಮಿಸಿ ಬಿಡಿ ಎಂದು ನನ್ನನ್ನು ಕೇಳಿಕೊಂಡರು. ಅಲ್ಲದೆ ಅವರ ಮಗಳು ಕೂಡ ಬಂದು ಕೇಳಿಕೊಂಡಾಗ ನಾನು ಅವರಿಗೆ ಹೇಳಿದೆ ಈಗಾಗಲೇ FIR ದಾಖಲಾಗಿದೆ ಅದನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಅವರ ನಿಂದನೆ ಭಾಷೆಯಿಂದ ಕೊಲೆ ಬೆದರಿಕೆಯಿಂದ ಅವಾಚ್ಯ ಪದಗಳ ನಿಂದನೆಯಿಂದ ನನ್ನ ಕುಟುಂಬದವರೂ ಮನನೊಂದಿದ್ದಾರೆ. ಈ ಕುರಿತು ನಾನು ಈಗಾಗಲೇ ಸ್ಪೀಕರ್ ಯುಟಿ ಖಾದರ್ ಗೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಘಟನೆ ಹಿನ್ನೆಲೆ?
ಬಿಜೆಪಿ ಶಾಸಕ ಕೆ ಗೋಪಾಲಯ್ಗೆ ಜೀವ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಮಾಜಿ ಕಾರ್ಪೊರೇಟರ್ ಪದ್ಮನಾಭ ವಿರುದ್ಧ ಎಫ್ FIR ದಾಖಲಾಗಿದೆ. ರಾತ್ರಿ 11:00 ಕರೆ ಮಾಡಿ ಅವಾಚ್ಯವಾಗಿ ನಿಂದನೆ ಮಾಡಿದ್ದು, ಅಲ್ಲದೆ ನಿಂದನೆ, ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ FIR ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಗೋಪಾಲಯ್ಯ, ರಾತ್ರಿ 11:00ಗೆ ಕರೆ ಮಾಡಿ ನನಗೆ ಅವಾಚಕ ಶಬ್ದಗಳಿಂದ ಬೈದಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದಾನೆ ನನಗೂ ನನ್ನ ಕುಟುಂಬದವರಿಗೂ ಅವಾಚ್ಯವಾಗಿನಿಂದನೆ ಮಾಡಿದ್ದಾನೆ ಆದ್ದರಿಂದ ಕೂಡಲೇ ಪದ್ಮನಾಭನನ್ನು ಗಡಿ ಪಾರು ಮಾಡಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ತನಿಖೆಯನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ.