ಮಧ್ಯಪ್ರದೇಶ : ಮಧ್ಯಪ್ರದೇಶದ ಹರ್ದಾದಲ್ಲಿ ಪಟಾಕಿ ಕಾರ್ಖಾನೆ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 11 ರಿಂದ 15 ಸ್ಪೋಟಗಳು ಸಂಭವಿಸಿದ್ದು ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 5 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದ ಅರ್ಧದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು 5 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದ್ದೂ, 25 ಕಾರ್ಮಿಕರಿಗೆ ಗಂಭೀರವಾದಂತ ಸುಟ್ಟು ಗಾಯಗಳಾಗಿದ್ದು ಅವರೆಲ್ಲರನ್ನೂ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆಎಂದು ತಿಳಿದು ಬಂದಿದೆ.ಪಟಾಕಿ ಕಾರ್ಖಾನೆಯಲ್ಲಿ 11 ರಿಂದ 15 ಸ್ಪೋಟಗಳು ಸಂಭವಿಸಿವೆ.
ಕಾರ್ಖಾನೆಯಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಖಾನೆಯ ಸುತ್ತಲೂ ಐವತ್ತು ಮನೆಗಳಿಗೆ ಬೆಂಕಿ ಆವರಿಸಿದ್ದು ಮನೆಗಳೆಲ್ಲ ಸುಟ್ಟು ಬಸ್ಮವಾಗಿವೆ ಕಾರ್ಖಾನೆಯಲ್ಲಿ 25 ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದ್ದೂ, 5 ಜನರು ಕಾರ್ಮಿಕರು ಸಾವನ್ನಪ್ಪಿರುವುದು ಎಂದು ತಿಳಿದುಬಂದಿದೆ.