ಯಾದಗಿರಿ : ಕಳೆದ ಎರಡು ದಿನಗಳ ಹಿಂದೆ ಯಾದಗಿರಿಯಲ್ಲಿ ಅನ್ಯಕೋಮಿನ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಬಜರಂಗದಳ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಲ್ಲಿಗೆ ಒಳಗಾದ ಯುವಕನ ವಿರುದ್ಧ ಬಾಲಕಿಯ ಪೋಷಕರು ಪೋಕ್ಸೋ ಕೇಸ್ ದಾಖಲಿಸಿದ್ದಾರೆ.
ಅನ್ಯ ಕೋಮೀನ ಬಾಲಕಿಗೆ ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆದಿತ್ತು ಮೂರು ದಿನಗಳ ಹಿಂದೆ ಯಾದಗಿರಿ ನಗರದಲ್ಲಿ ಈ ಘಟನೆ ನಡೆದಿತ್ತು. ಹಲ್ಲೆ ಸಂಬಂಧ ಪಟ್ಟಂತೆ ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈಗ ಬಾಲಕಿಯ ಪೋಷಕರಿಂದ ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಬಾಲಕಿಯ ಜೊತೆಗಿದ್ದ ಫೋಟೋ ವಿಡಿಯೋ ತೋರಿಸಿ ಯುವಕ ಬ್ಲಾಕ್ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಯುವಕನ ವಿರುದ್ಧ ಬ್ಲಾಕ್ಮೇಲ್ ಬೆದರಿಕೆ ಆರೋಪದಡಿ ದಾಖಲಾಗಿದೆ. ಅಲ್ಲದೆ ಯುವಕನ ಕುಟುಂಬದ ಜೊತೆಗೆ 16 ಜನರು ಬಿರುದ ಕೂಡ ಯಾದಗಿರಿ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಘಟನೆ ಹಿನ್ನೆಲೆ?
ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಬಜರಂಗದಳ ಮುಖಂಡರು ಯುವಕನಿಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಾಲೇಜಿನಿಂದ ಮನೆಗೆ ಬರುತ್ತಿದ್ದ ವೇಳೆ ನಗರದ ಗೋಗಿ ಮೊಹಲ್ಲಾ ನಿವಾಸಿ ವಾಹಿದ್ ಎಂಬಾತನನ್ನು ಅಪಹರಿಸಲಾಗಿದೆ. 5 ಗಂಟೆ ಕಾಲ ಕೋಣೆಯಲ್ಲಿ ಕೂಡಿ ಹಾಕಿ ವಾಹಿದ್ ಮೇಲೆ ಹಲ್ಲೆ ಮಾಡಿದ್ದಾರೆ. ಬೆನ್ನಿಗೆ ಬಾಸುಂಡೆ ಬರುವ ಹಾಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಶಿವಕುಮಾರ್, ತಾಯಪ್ಪ, ಮಲ್ಲು, ಅಂಬರೀಶ್ ಸೇರಿ 9 ಜನರಿಂದ ಹಲ್ಲೆ ಮಾಡಲಾಗಿದ್ದು, ನಗರ ಠಾಣೆಯಲ್ಲಿ 9 ಜನರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 307, 323, 341, 342, 363, 504 ಹಾಗೂ 506ರ ಅಡಿ ಪ್ರಕರಣ ದಾಖಲಾಗಿದೆ. ಇತ್ತ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.