ವಿಜಯಪುರ : ಆಟವಾಡುತ್ತಾ ಆಯತಪ್ಪಿ ಕೊಳವೆ ಬಾವಿಗೆ ಎರಡು ವರ್ಷದ ಬಾಲಕ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದ್ದು ಇದೀಗ ಬಾಲಕನ ರಕ್ಷಣಾ ಕಾರ್ಯ ಆಚರಣೆಗೆ ಹೈದ್ರಾಬಾದ್ NDRF ತಂಡ ಎಂಟ್ರಿ ಕೊಟ್ಟಿದೆ. ಕಾರ್ಯಾಚರಣೆ ಕಲ್ಲುಬಂಡೆ ಅಡ್ಡಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸತತ 12 ಗಂಟೆಗಳ ಕಾಲ ಅಲ್ಲಿ ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು ಇದೀಗ ಮಗು ಸುಮಾರು 20 ಅಡಿ ಆಳದವರೆಗೆ ಬಿದ್ದಿದ್ದು 18 ಅಡಿವರೆಗೆ ತಲುಪಿದ್ದು ಇನ್ನೇನು ಎರಡುಡಿ ತಲುಪಿದರೆ ಮಗುವನ್ನು ರಕ್ಷಿಸಬಹುದಾಗಿದೆ ಆದರೆ ಅಲ್ಲಿ ಕಲ್ಲು ಬಂಡೆ ಅಡ್ಡಿಯಾಗಿರುವುದರಿಂದ ಈ ಒಂದು ರಕ್ಷಣಾ ಕಾರ್ಯಚನೆ ಇದೀಗ ಹೈದರಾಬಾದ್ ನಿಂದ ಎನ್ ಡಿ ಆರ್ ಎಫ್ ತಂಡ ಎಂಟ್ರಿ ಕೊಟ್ಟಿದೆ.
ನಿನ್ನೆ ಗ್ರಾಮದ ಶಂಕರಪ್ಪ ಮುಜಗೊಂಡ ಎನ್ನುವವರ ಜಮೀನಿನಲ್ಲಿ ಕೊಳವೆ ಬಾವಿಯಲ್ಲಿ ಎರಡು ವರ್ಷದ ಬಾಲಕ ಸಾತ್ವಿಕ್ ಸುಮಾರು 15ರಿಂದ 20 ಅಡಿ ಆಳದಲ್ಲಿ ಬಿದ್ದಿದ್ದಾನೆ ಎಂದು ತಿಳಿದುಬಂದಿದ್ದು ಇದೀಗ ಸ್ಥಳದಲ್ಲಿ ಎರಡು ಹಿಟಾಚಿ ಮೂರು ಜಿಸಿಬಿ ಗಳಿಂದ ಸಾತ್ವಿಕನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಅಲ್ಲದೆ ಎಸ್ ಡಿ ಆರ್ ಎಫ್ ಅಚಂಡ ಕೂಡ ಸ್ಥಳದಲ್ಲಿ ಬೀಡು ಬಿಟ್ಟಿದೆ.
ಮಗುವಿನ ರಕ್ಷಣಾ ಕಾರ್ಯಕ್ಷಣೆಗೆ ಈ ವೇಳೆ ಬಂಡೆಗಳು ಅಡ್ಡಿಯಾಗಿದ್ದು ಬಂಡೆ ಸಿಕ್ಕಿದ್ದರಿಂದ ರಕ್ಷಣಾ ವಿಳಂಬವಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಕಲ್ಲು ಬಂಡೆ ಅಡ್ಡಿಯಾಗಿ ಇರುವುದರಿಂದ ಇದೀಗ ಸಿಬ್ಬಂದಿಗಳು ಕೈಯಿಂದ ನೆಲ ಆಗೇಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.