ಉಡುಪಿ: ನಗರದ ಕಿನ್ನಿಮುಲ್ಕಿ ಗೋಪುರ ಬಳಿ ಮುನಿಸಿಪಾಲಿಟಿ ಸದಸ್ಯರು ಸ್ವಂತ ಖರ್ಚಲ್ಲಿ ಮೀನುಗಾರ ಮೊಗವೀರ ಮಹಿಳೆಯರಿಗಾಗಿ ನಿರ್ಮಿಸಲಾಗಿದ್ದ ಶೀಟ್ ಶೆಡ್ಗಳನ್ನು ಉಡುಪಿ ನಗರಸಭೆ ಅಧಿಕಾರಿಗಳು ಬುಲ್ಡೋಜರ್ ತಂದು ಕೆಡವಿದ ದುರಂತ ಘಟನೆಗೆ ಜನರ ಆಕ್ರೋಶಗೊಂಡಿದ್ದಾರೆ
‘ವಾಹನ ಚಾಲನಾ ತರಬೇತಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಉಚಿತ ತರಬೇತಿಗಾಗಿ ಬಿಎಂಟಿಸಿಯಿಂದ ಅರ್ಜಿ ಆಹ್ವಾನ
ಉಡುಪಿಯ ಕಿನ್ನಿಮುಲ್ಕಿ ಗೋಪುರ ಬಳಿ ಕಳೆದ 30 ವರ್ಷದಿಂದ ಮೊಗವೀರ ಮಹಿಳೆಯರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾ ಬಿಸಿಲು ಮಳೆಯನ್ನು ಲೆಕ್ಕಿಸದೇ ಜೀವನವನ್ನು ಮಾಡುತ್ತಿದ್ದಾರೆ. ಸ್ಥಳೀಯ ನಗರಸಭಾ ಸದಸ್ಯೆ ತನ್ನ ಗೌರವ ಧನ 2 ಲಕ್ಷ ರೂ. ಬಳಸಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಕಳೆದ 2-3 ದಿನಗಳಿಂದ ಕೆಲಸ ಆಗುತ್ತಿತ್ತು. ಈ ಪುಟ್ಟ ಶೆಡ್ ನಿರ್ಮಿಸಲಾಗುತ್ತಿತ್ತು. ಉಡುಪಿ ನಗರಸಭೆ ಅಧಿಕಾರಿಗಳು ಶೀಟ್ ಶೆಡ್ ಅನ್ನು ಬುಲ್ಡೋಜರ್ ತಂದು ಕೆಡವಿ ಹಾಕಿದ್ದಾರೆ.
ಈ ಬೆಳವಣಿಗೆ ವಿರುದ್ಧ ಸ್ಥಳೀಯ ಆಟೋ ಸ್ಟ್ಯಾಂಡ್ ನಗರಸಭಾ ಸದಸ್ಯೆ, ನೂರಾರು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆಯ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಬಂದಿದ್ದ ಕಾರಿಗೆ ಮುತ್ತಿಗೆ ಹಾಕಿ ಸ್ಥಳದಿಂದ ತೆರಳದಂತೆ ದಿಗ್ಬಂಧನ ಮಾಡಿದ್ದಾರೆ.
‘ವಾಹನ ಚಾಲನಾ ತರಬೇತಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಉಚಿತ ತರಬೇತಿಗಾಗಿ ಬಿಎಂಟಿಸಿಯಿಂದ ಅರ್ಜಿ ಆಹ್ವಾನ
ಇದೊಂದು ಅಕ್ರಮ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲೇ ಶೆಡ್ ಹಾಕಲಾಗಿದೆ. ಹೀಗಾಗಿ ನಾವು ತೆರವು ಮಾಡುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾದ ಪ್ರತಿವಾದ ನಡೆಯಿತು. ನಂತರ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ನಗರಸಭೆ ಆಡಳಿತದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
‘ವಾಹನ ಚಾಲನಾ ತರಬೇತಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಉಚಿತ ತರಬೇತಿಗಾಗಿ ಬಿಎಂಟಿಸಿಯಿಂದ ಅರ್ಜಿ ಆಹ್ವಾನ