ಲಕ್ನೋ: ಪೊಲೀಸ್ ಪೇದೆಯೋರ್ವರು ಅಂಗಡಿ ಹೊರಗೆ ಹಾಕಿದ್ದ ಬಲ್ಪ್ ಕಳ್ಳತನ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಉತ್ತರ ಪ್ರದೇಶದ ಪ್ರಾರ್ಥನ್ರಾಜ್ನಲ್ಲಿ ಒಬ್ಬ ಪೋಲೀಸ್ ಅಮಾನತುಗೊಳಿಸಲಾಗಿದೆ.
‘ನ್ಯಾಯದಾನದಲ್ಲಿ ವಿಳಂಬವೇ ದೇಶದ ಜನತೆಗೆ ದೊಡ್ಡ ಅಡಚಣೆ’: ಪ್ರಧಾನಿ ಮೋದಿ
ಪ್ರಾರ್ಥರಾಜ್ ಜಿಲ್ಲೆಯ ಫಲ್ಪೂರ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ರಾಜೇಶ್ ವರ್ಮಾ ಎಂಬುವವರು, ಕೃತ್ಯವೆಸಗಿದ್ದು, ಅವರು ಬಂದ್ ಆಗಿದ್ದ ಅಂಗಡಿಯ ಸುತ್ತಮುತ್ತ ನೋಡಿ ಬಳಿಕ ಬಲ್ಪ್ ಅನ್ನು ಕಳ್ಳತನ ಮಾಡಿರುವುದನ್ನು ಸಿಸಿಟಿವಿಯಲ್ಲಿ ನೋಡಬಹುದು.
Caught on cam: Police inspector on patrol steals light bulb in UP's Prayagraj pic.twitter.com/6hCw01rr63
— Aaquil Jameel (@AaquilJameel) October 15, 2022
ಮರುದಿನ ಬೆಳಿಗ್ಗೆ ಕಾಣೆಯಾದ ಬಲ್ಬ್ ಬಗ್ಗೆ ಅಂಗಡಿ ಮಾಲೀಕ ಮರಿಶೀಲನೆ ಮಾಡಿದ್ದಾನೆ. ಈ ವೇಳೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಬೇಕಾದ ಪೊಲೀಸರೇ ಕಳ್ಳತನ ಮಾಡಿರುವ ವಿಚಾರ ತಿಳಿದು ಬಂದಿದೆ. ಕೂಡಲೇ ಅಂಗಡಿ ಮಾಲೀಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಿಸಿಟಿವಿ ಪೂಟೇಜ್ ಅನ್ನು ಮೀಡಿದ್ದರು.
ಘಟನೆ ಸಂಬಂಧ ದೊಡ್ಡ ಆಕ್ರೋಶ ವ್ಯಕ್ತವಾದ ಬಳಿಕ ಉನ್ನತ ಅಧಿಕಾರಿಗಳು ಪೊಲೀಸ್ ಪೇದೆಯನ್ನು ಅಪೋಲೀಸ್ ಅನ್ನು ಅಮಾನತುಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ಕೆಲ ದಿನಗಳ ಹಿಂದೆ ಇಂತಹದ್ದೆ ಘಟನೆ ನಡೆದಿತ್ತು. ಕೆಲವು ದಿನಗಳ ಹಿಂದೆ ಕಾನ್ಪುರದಲ್ಲಿ, ಪಾದಚಾರಿ ಮಾರ್ಗದಲ್ಲಿ ಮಲಗಿರುವ ವ್ಯಕ್ತಿಯ ಜೇಬಿನಿಂದ ಮೊಬೈಲ್ ಫೋನ್ ಕದಿಯುವಾಗ ಪೊಲೀಸ್ ಅಧಿಕಾರಿ ಸಿಕ್ಕಿಬಿದ್ದಿದ್ದರು.