ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ಗ್ಲೋಬಲ್ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ರಕ್ತದ ಪ್ಲೇಟ್ಲೆಟ್ ಬದಲಾಗಿ ಮೊಸಂಬಿ ಜ್ಯೂಸ್ ಹಣ್ಣಿನ ರಸದ ಡ್ರಿಪ್ ಹಾಕಿದ್ದರ ಪರಿಣಾಮ ರೋಗಿಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಈ ಆಸ್ಪತ್ರೆಗೆ ಸಂಕಷ್ಟ ಎದುರಾಗಿದೆ.
ಹೌದು, ಅನಧಿಕೃತ ನಿರ್ಮಾಣಕ್ಕಾಗಿ ಪ್ರಯಾಗ್ರಾಜ್ನಲ್ಲಿರುವ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ಗೆ ಡೆಮಾಲಿಷನ್ ನೋಟಿಸ್ ನೀಡಲಾಗಿದೆ. ಅನುಮತಿ ಪಡೆಯದೆ ಆಸ್ಪತ್ರೆ ನಿರ್ಮಿಸಲಾಗಿದ್ದು, ಶುಕ್ರವಾರದೊಳಗೆ ಆಸ್ಪತ್ರೆಯನ್ನು ತೆರವು ಮಾಡಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಕಳೆದ ವಾರ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ಅಲ್ಲಿ ಯಾವುದೇ ರೋಗಿಗಳು ಚಿಕಿತ್ಸೆ ಪಡೆಯುತ್ತಿಲ್ಲ. ಈ ಬಗ್ಗೆ ಹಿಂದಿನ ನೋಟಿಸ್ಗಳಿಗೆ ಆಸ್ಪತ್ರೆ ಅಧಿಕಾರಿಗಳು ಉತ್ತರಿಸಲಿಲ್ಲ ಮತ್ತು ಈ ವರ್ಷದ ಆರಂಭದಲ್ಲಿ ನೆಲಸಮ ಆದೇಶವನ್ನು ರವಾನಿಸಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಈ ಆಸ್ಪತ್ರೆಯಲ್ಲಿ 32 ವರ್ಷದ ಡೆಂಗ್ಯೂ ರೋಗಿಗೆ ರಕ್ತದ ಪ್ಲೇಟ್ಲೆಟ್ ಬದಲಿಗೆ ಮೊಸಂಬಿ ಜ್ಯೂಸ್ ಡ್ರಿಪ್ ಹಾಕಲಾಗಿತ್ತು. ನಂತ್ರ ಆತ ಸಾವನ್ನಪ್ಪಿದ್ದ. ಮಗನ ಸಾವಿನಿಂದ ನೊಂದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಾಥಮಿಕ ವಿಚಾರಣೆಯ ವೇಳೆ ಇಲ್ಲಿನ ಅಧಿಕಾರಿಗಳ ಲೋಪ ಬಹಿರಂಗವಾಗಿದೆ. ಆದ್ರೆ, ವಿವಾದದ ಪ್ಲೇಟ್ಲೆಟ್ ಬ್ಯಾಗ್ನಲ್ಲಿ ಜ್ಯೂಸ್ ಇದೆಯೇ ಎಂಬ ವೈದ್ಯಕೀಯ ವರದಿಯನ್ನು ಸಾರ್ವಜನಿಕಗೊಳಿಸಲಾಗಿಲ್ಲ.
ಡೆಂಗ್ಯೂ ರೋಗಿಯ ಸಾವಿನ ಕೆಲವು ದಿನಗಳ ನಂತರ, ಪ್ರಯಾಗರಾಜ್ ಪೊಲೀಸರು “ನಕಲಿ ಪ್ಲೇಟ್ಲೆಟ್” ಗಳನ್ನು ಪೂರೈಸುವ ಗ್ಯಾಂಗ್ ಅನ್ನು ಭೇದಿಸಿ 10 ಜನರನ್ನು ಬಂಧಿಸಿದ್ದರು. ಅವರು ರಕ್ತ ಬ್ಯಾಂಕ್ಗಳಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಅವುಗಳನ್ನು ಪ್ಲೇಟ್ಲೆಟ್ಗಳಾಗಿ (ರಕ್ತದ ಎರಡೂ ಘಟಕಗಳಾಗಿ) ಮರು ಪ್ಯಾಕ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS : ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ : ನವೆಂಬರ್ ನಲ್ಲಿ ರಾಜ್ಯಾದ್ಯಂತ `ಬಸ್ ಯಾತ್ರೆ’
BIGG NEWS : ನ. 1 ರಿಂದ 35 ಕ್ಷೇತ್ರಗಳಲ್ಲಿ ಜೆಡಿಎಸ್ ‘ಪಂಚರತ್ನ ರಥಯಾತ್ರೆ’ : ಎಲ್ಲೆಲ್ಲಿ ಸಾಗಲಿದೆ ಗೊತ್ತಾ..?
BIGG NEWS : ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ : ನವೆಂಬರ್ ನಲ್ಲಿ ರಾಜ್ಯಾದ್ಯಂತ `ಬಸ್ ಯಾತ್ರೆ’