ಉತ್ತರ ಪ್ರದೇಶ: ಯುಪಿಯ ಹತ್ರಾಸ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ಕನ್ವರ್ ಯಾತ್ರಿಕರು ಸಾವನ್ನಪ್ಪಿದ ಘಟನೆ ಬಳಿಕ ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ)ಯನ್ನು ಉತ್ತರಪ್ರದೇಶ ಸರ್ಕಾರ ವರ್ಗಾವಣೆ ಮಾಡಿದೆ.
BIGG NEWS : ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಆಹ್ವಾನ!
ಅಲ್ಲಿನ ಎಸ್ಪಿ ವಿಕಾಸ್ ವೈದ್ಯ ಬದಲಿಗೆ ದೇವೇಶ್ ಪಾಂಡೆ ಅವರು ಹತ್ರಾಸ್ನ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಸದ್ಯ ವಿಕಾಸ್ ವೈದ್ಯ ಅವರನ್ನು ಪಿಎಸಿ ಮಿರ್ಜಾಪುರಕ್ಕೆ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ.
ಕನ್ವರ್ ಭಕ್ತರು ಹೋಗುವ ದಾರಿಯಲ್ಲಿ ಯಾವುದೇ ಭಾರೀ ವಾಹನಗಳನ್ನು ಅನುಮತಿಸದಂತೆ ಸರ್ಕಾರ ಸೂಚನೆ ನೀಡಿತ್ತು. ಇದನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ವಿಕಾಸ್ ವೈದ್ಯ ವಿರುದ್ಧ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.
ಶನಿವಾರ (ಜುಲೈ 23) ಬೆಳಗಿನ ಜಾವ ಹತ್ರಾಸ್ ಆಗ್ರಾ ರಸ್ತೆಯ ಬಧರ್ ಗ್ರಾಮದ ಬಳಿ ಎನ್ಹೆಚ್-93 ರ ಹತ್ರಾಸ್ನಲ್ಲಿರುವ ಸದಾಬಾದ್ ಪಿಎಸ್ನಲ್ಲಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆರು ಕನ್ವರ್ ಯಾತ್ರಿಕರು ಸಾವನ್ನಪ್ಪಿದ್ದರು. ಮೃತಪಟ್ಟವರೆಲ್ಲ ಮಧ್ಯಪ್ರದೇಶದ ಗ್ವಾಲಿಯರ್ಗೆ ಮೂಲದವರು ಎಂದು ತಿಳಿದು ಬಂದಿದೆ.
BIGG BREAKING NEWS : ದೇಶದಲ್ಲಿ ಮತ್ತೆ ಇಳಿಕೆ ಕಂಡ ಕೊರೊನಾ : 24 ಗಂಟೆಯಲ್ಲಿ 20,279 ಕೇಸ್ ಪತ್ತೆ