ನವದೆಹಲಿ: ಲಖಿಂಪುರ್ ಖೇರಿ ಜಿಲ್ಲೆಯ ನಿಘಾಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಇಬ್ಬರು ಅಪ್ರಾಪ್ತ ಸಹೋದರಿಯರ ಸಾವಿಗೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಸ್ಥಳೀಯ ಗ್ರಾಮಸ್ಥ ಚೋಟು ಗೌತಮ್ ಮತ್ತು ಹತ್ತಿರದ ಗ್ರಾಮದ ಐವರು ಯುವಕರನ್ನು ಬಂಧಿಸಲಾಗಿದೆ ಎಂದು ಲಖಿಂಪುರ್ ಖೇರಿ ಎಸ್ಪಿ ಸಂಜೀವ್ ಸುಮನ್ ತಿಳಿಸಿದ್ದಾರೆ. ಇತರ ಐವರನ್ನು ನೆರೆಯ ಲಾಲ್ಪುರ್ ಗ್ರಾಮದ ಜುನೈದ್, ಸೊಹೈಲ್, ಹಫೆಜುಲ್ ರೆಹಮಾನ್, ಕರಿಮುದ್ದಿನ್ ಮತ್ತು ಆದಿಲ್ ಎಂದು ಗುರುತಿಸಲಾಗಿದೆ. ಬಂಧನಗಳು ಮತ್ತು ಘಟನೆಗಳ ಅನುಕ್ರಮದ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ ಪೊಲೀಸರು, ಸೊಹೈಲ್ ಮತ್ತು ಹಫೀಜ್ ರೆಹಮಾನ್ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಅಂತ ತಿಳಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ಕರೀಮುದ್ದಿನ್ ಮತ್ತು ಆದಿಲ್ ಇತರ ಮೂವರಿಗೆ ಶವಗಳನ್ನು ವಿಲೇವಾರಿ ಮಾಡಲು ಸಹಾಯ ಮಾಡಿದರು. ಪೊಲೀಸ್ ಎನ್ಕೌಂಟರ್ ಸಮಯದಲ್ಲಿ ಪ್ರತೀಕಾರವಾಗಿ ಗುಂಡು ಹಾರಿಸಿದಾಗ ಜುನೈದ್ ಬಲಗಾಲಿಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ.