ಹುಬ್ಬಳ್ಳಿ : ಇತ್ತೀಚಿಗೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಅಂಜಲಿ ಅಂಬಿಗೇರ ಎನ್ನುವ ಯುವತಿಯ ಬರ್ಬರ ಕೊಲೆಯಾಗಿತ್ತು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಇಂದು ಅಂಬಿಗೇರ ಚೌಡಯ್ಯ ಪೀಠದ ಶಾಂತಭೀಷ್ಮ ಶ್ರೀಗಳು ಮಾತನಾಡಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ತಂದಿರುವ ಕಾನೂನು ರಾಜ್ಯದಲ್ಲೂ ತರಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂಜಲಿ ಕೊಲೆ ಪ್ರಕರಣಕ್ಕೆ ಸರ್ಕಾರವೇ ನೇರ ಕಾರಣ. ಪೊಲೀಸರ ನಿರ್ಲಕ್ಷವೇ ಈ ಒಂದು ಉಘಟನೆಗೆ ಕಾರಣ. ನೇಹಾ ಹಿರೇಮಠ್ ಕೊಲೆಯ ಬಳಿಕ ಮತ್ತೆ ಇದೇ ರೀತಿಯ ಕೃತ್ಯ ನಡೆದಿದೆ.ಯಾರೇ ಆಗಲಿ ತೊಂದರೆ ಅಂತ ಬಂದಾಗ ನ್ಯಾಯ ಕೊಡಿಸಬೇಕು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದಿರುವ ಕಾನೂನು ಇಲ್ಲಿಯೂ ತರಬೇಕು. ಅಂಜಲಿಯದ್ದು ಬಡ ಕುಟುಂಬ ಅವರಿಗೆ ಮನೆ ಕೊಡಬೇಕು. ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಬೇಕು. ಅಂಜಲಿ ಕುಟುಂಬದವರಿಗೆ ಸೂಕ್ತ ರಕ್ಷಣೆ ಕೊಡಬೇಕು.ಅಂಜಲಿ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುತ್ತದೆ ಎಂದು ಅಂಬಿಗೇರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ತಿಳಿಸಿದರು.