ಕೊಟ್ಟಾಯಂ (ಕೇರಳ): ಸಾಮಾನ್ಯವಾಗಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ರಜೆ ನೀಡಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯವು ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆ ನೀಡಲು ನಿರ್ಧರಿಸಿದೆ.
ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯವು (ಎಂಜಿಯು) 18 ವರ್ಷ ಮೇಲ್ಪಟ್ಟ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 60 ದಿನಗಳ ಹೆರಿಗೆ ರಜೆ ನೀಡಲು ನಿರ್ಧರಿಸಿದ್ದು, ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಅಧ್ಯಯನವನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿದೆ.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಪ್ರಕಾರ, ಪ್ರೊ ವೈಸ್ ಚಾನ್ಸಲರ್ ಸಿಟಿ ಅರವಿಂದ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.
ಈ ವಿಷಯದ ಬಗ್ಗೆ ಅಧ್ಯಯನ ನಡೆಸಲು ಸಿಂಡಿಕೇಟ್ ರಚಿಸಿರುವ ಸಮಿತಿಯ ಶಿಫಾರಸುಗಳನ್ನು ಅನುಮೋದಿಸಿದೆ ಎನ್ನಲಾಗುತ್ತಿದೆ.
ವಿಶ್ವವಿದ್ಯಾನಿಲಯದ ಪ್ರಕಾರ, ಹೆರಿಗೆ ರಜೆಯನ್ನು ಹೆರಿಗೆಯ ಮೊದಲು ಅಥವಾ ನಂತರ ತೆಗೆದುಕೊಳ್ಳಬಹುದು. ಆದರೆ ಮೊದಲ ಅಥವಾ ಎರಡನೆಯ ಗರ್ಭಧಾರಣೆಗೆ ಮಾತ್ರ ಈ ರಜೆ ನೀಡಲಾಗುತ್ತಿದೆ ಎಂದು ಸ್ಟಷ್ಟನೆ ನೀಡಿದೆ.
ರಜೆಯ ಅವಧಿಯು ಸಾರ್ವಜನಿಕ ಮತ್ತು ಸಾಮಾನ್ಯ ರಜಾದಿನಗಳನ್ನು ಒಳಗೊಂಡಿರುತ್ತದೆ. ಅದರೊಂದಿಗೆ ಯಾವುದೇ ರಜೆಯನ್ನು ಸೇರಿಸಲಾಗುವುದಿಲ್ಲ. ಗರ್ಭಪಾತ, ಟ್ಯೂಬೆಕ್ಟಮಿ ಇತ್ಯಾದಿ ಪ್ರಕರಣಗಳಲ್ಲಿ 14 ದಿನಗಳ ರಜೆ ನೀಡಲಾಗುವುದು ಎಂದು ತಿಳಿಸಿದೆ.
ಒಂದು ಸೆಮಿಸ್ಟರ್ನಲ್ಲಿ ಹೆರಿಗೆ ರಜೆ ತೆಗೆದುಕೊಳ್ಳುವವರಿಗೆ ಆ ಸೆಮಿಸ್ಟರ್ನ ಪರೀಕ್ಷೆಗಳಿಗೆ ನೋಂದಾಯಿಸಲು ಅನುಮತಿಸಲಾಗುವುದು. ಆದರೆ ಮುಂದಿನ ಸೆಮಿಸ್ಟರ್ನಲ್ಲಿ ಸಾಮಾನ್ಯ ವಿದ್ಯಾರ್ಥಿಗಳ ಜೊತೆಗೆ ಅದನ್ನು ಪೂರಕವಾಗಿ ಬರೆಯಬಹುದು.
ಹೆರಿಗೆ ರಜೆಯಲ್ಲಿರುವ ವಿದ್ಯಾರ್ಥಿಗಳು ಪ್ರಾಯೋಗಿಕ, ಲ್ಯಾಬ್ ಮತ್ತು ವೈವಾ ಪರೀಕ್ಷೆಗಳನ್ನು ಹೊಂದಿದ್ದರೆ, ಸಂಸ್ಥೆ ಅಥವಾ ವಿಭಾಗದ ಮುಖ್ಯಸ್ಥರು ಇದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸಿಂಡಿಕೇಟ್ ಹೇಳಿದೆ.
‘ಹಣ ಅಥವಾ ವಸ್ತು ರೂಪದ ಪರಿಹಾರವು ಅಪಘಾತ ಸಂತ್ರಸ್ತರ ಆಘಾತವನ್ನು ಅಳಿಸಲು ಸಾಧ್ಯವಿಲ್ಲ’: ಸುಪ್ರೀಂ ಕೋರ್ಟ್