ಬೆಂಗಳೂರು:ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ನೀಡಿ ಪ್ರಸಕ್ತ ವರ್ಷದಲ್ಲಿ ಶೇ10% ರಷ್ಟು ಶುಲ್ಕ ಏರಿಕೆ ಮಾಡಲು ಉನ್ನತ್ತ ಶಿಕ್ಷಣ ಇಲಾಖೆ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಿದೆ. ಮುಂದಿನ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಬಿಸಿ ತಾಗಲಿದೆ.ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಉನ್ನತ ಪದವಿ ಓದಲು ಬರುವ ಮಕ್ಕಳಿಗೆ ಬಹಳ ತೊಂದರೆಯಾಗಲಿದೆ.
2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಹಾಗೂ ಯೂನಿವರ್ಸಿಟಿಗಳಲ್ಲಿ ಕನಿಷ್ಠ ಶೇ10% ರಷ್ಟು ಶುಲ್ಕ ಏರಿಕೆಗೆ ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಿದ್ದು ಇದರಿಂದ ಪದವಿ ಓದಲು ಬರುವ ವಿದ್ಯಾರ್ಥಿಗಳಿಗೆ ಕಷ್ಟ ಆಗಲಿದೆ.ಸರ್ಕಾರದ ತೀರ್ಮಾನ ದಿಂದ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಶೇ 10ರಷ್ಟು ಶುಲ್ಕ ಏರಿಸಿದೆ. ಈಗಾಗಲೇ ಈ ಪರಿಷ್ಕೃತ ಶುಲ್ಕ ಪಟ್ಟಿಯನ್ನ ಯೂನಿವರ್ಸಿಟಿಗಳಿಗೆ ನೀಡಿ ಸರ್ಕಾರ ಸೂಚನೆ ನೀಡಿದೆ.