ಹುಬ್ಬಳ್ಳಿ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರಹ್ಲಾದ್ ಜೋಶಿ ಹೈಟೆಕ್ ಏನೇನೋ ಮಾತಾಡ್ತಾರೆ ಎಂದು ತಿರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು. 530 ಗಣಿ ಗುತ್ತಿಗೆಗಳನ್ನು ಆದಾನಿಗೆ ಕೊಟ್ಟಿದ್ದಾರೆ. ಇದರ ಬಗ್ಗೆ ಕೇಂದ್ರ ಸಚಿವ ಜೋಶಿ ಚರ್ಚೆ ಮಾಡುತ್ತಾರಾ? ಐದು ವರ್ಷದ ಅವಧಿಯಲ್ಲಿ ಎಷ್ಟು ಮೈನಿಂಗ್ ಲೈಸನ್ಸ್ ಯಾರಿಗೆ ಕೊಟ್ಟಿದ್ದೀರಿ ಯಾವ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ವಾಗ್ದಾಳಿ ನಡೆಸಿದರು.
ಅಮಿತ್ ಶಾ ಮಗ ಜಯ್ ಶಾ ಬ್ಯಾಂಕ್ ನಲ್ಲಿ ಹಣ ಟ್ರಾನ್ಸ್ಫರ್ ಆಗಿದೆ. ಈ ಬಗ್ಗೆ ಡೇಟಾ ಕೊಡಲಾ? ಕೇಂದ್ರ ಸಚಿವ ಜೋಶಿ ಹೈಟೆಕ್ ಏನೇನೋ ಮಾತಾಡ್ತಾರೆ. ಜೋಶಿ ಅವರು ನೀಟ್ ಅಕ್ರಮದ ಬಗ್ಗೆ ಏಕೆ ಮಾತಾಡಲ್ಲ? ಏರ್ಪೋರ್ಟ್ ಕುಸಿದು ಬಿದ್ದು ರೈಲ್ವೆ ಅಪಘಾತ ಬಗ್ಗೆ ಜೋಷಿ ಏಕೆ ಮಾತಾಡಲ್ಲ? ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದರು.