ಬೆಂಗಳೂರು : ಸಿದ್ದರಾಮಯ್ಯನವರೇ ರಾಜ್ಯದ ಜನತೆಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ, ನಾಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಜೀಯ ಕೈಯಿಂದಲೇ ಇಂದು ಸಾವಿರಾರು ಕೋಟಿ ರೂ. ವೆಚ್ಚದ ಯೋಜನೆಗಳನ್ನು ಉದ್ಧಾಟನೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
BIGG NEWS : ವಿಜಯಪುರದಲ್ಲಿ ದಲಿತ ಯುವಕನನ್ನು ಕಟ್ಟಿ ಹಾಕಿ ಥಳಿಸಿದ ಸವರ್ಣೀಯರು : 14 ಜನರ ಬಂಧನ
ಈ ಕುರಿತು ಟ್ವೀಟ್ ಮಾಡಿರುವ ಅವರು, ಸುಳ್ಳುಸುದ್ದಿಯ ಸಿದ್ದರಾಮಯ್ಯನವರೇ, ಕೆಂಪೇಗೌಡರನ್ನು ಆದರ್ಶವಾಗಿಟ್ಟುಕೊಂಡು ನಾಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯ ಕೈಯಿಂದಲೇ ಇಂದು ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ನಮ್ಮ ರಾಜ್ಯದಲ್ಲಿ ಉದ್ಘಾಟನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
#ಸುಳ್ಳುಸುದ್ದಿಯ @siddaramaiah ನವರೇ, ಕೆಂಪೇಗೌಡರನ್ನು ಆದರ್ಶವಾಗಿಟ್ಟುಕೊಂಡು ನಾಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಜೀಯ ಕೈಯಿಂದಲೇ ಇಂದು ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ನಮ್ಮ ರಾಜ್ಯದಲ್ಲಿ ಉದ್ಘಾಟನೆ ಮಾಡಿದ್ದೇವೆ.
— Pralhad Joshi (@JoshiPralhad) November 12, 2022
ಅಧಿಕಾರ ಕೈಯಲಿಲ್ಲ ಎಂಬ ಹತಾಶೆಯಿಂದ ಪ್ರಶ್ನಿಸುವ ಸಲುವಾಗಿ ರಾಜ್ಯದ ಜನತೆಗೆ ಸುಳ್ಳು ಸುದ್ದಿ ಮುಟ್ಟಿಸಬೇಡಿ, ಯಾಕೆಂದರೆ ನೀವು ಕೂಡ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಎಂದು ವಾಗ್ದಾಳಿ ನಡೆಸಿದ್ದಾರೆ.