ಹುಬ್ಬಳ್ಳಿ : ಕಲ್ಬುರ್ಗಿ ಜಿಲ್ಲೆ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ನಿರಾಕರಣೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ರಾಜ್ಯ ಸರ್ಕಾರ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮುಂದಾಗಿದೆ ಗಮನ ಬೇರೆ ಕಡೆ ಸೆಳೆಯಲು ಬೇಕು ಅಂತಲೇ ಹೀಗೆ ಮಾಡುತ್ತಿದ್ದಾರೆ. ಕೆಲ ವರ್ಷ ಬಿಟ್ಟರೆ ಎಲ್ಲಾ ವರ್ಷಗಳಲ್ಲೂ ಆರ್ ಎಸ್ ಎಸ್ ಪಥ ಸಂಚಲನ ನಡೆದಿದೆ ಎಂದು ತಿಳಿಸಿದರು.
ಸಚಿವ ಪ್ರಿಯಾಂಕ ಖರ್ಗೆ ಅಸಹಿಷ್ಣತೆ ಒಳ್ಳೆಯದಲ್ಲ. ಮಲ್ಲಿಕಾರ್ಜುನ ಖರ್ಗೆ ಜೊತೆ ವಿನಮ್ರವಾಗಿ ಮಾತನಾಡುತ್ತೇವೆ. ಅವರು ಸಹ ನಮ್ಮ ಜೊತೆಗೆ ಚೆನ್ನಾಗಿ ಮಾತನಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಅಸಹಿಷ್ಣುತೆ ಮೆರೆದಿರಲಿಲ್ಲ. ತಂದೆಯನ್ನು ನೋಡಿ ಸಚಿವ ಪ್ರಿಯಾಂಕ ಖರ್ಗೆ ಕಲಿಯಬೇಕು ನಮ್ಮ ಮುಖಂಡರು ಅಕ್ರೋಶದಿಂದ ಪ್ರತಿಕ್ರಿಯಿಸಲು ಹೋಗಬಾರದು ಅವರು ಹೇಳಿಕೆ ಬಗ್ಗೆ ಆರ್ ಎಸ್ ಎಸ್ ನೋಡಿಕೊಳ್ಳುತ್ತದೆ. ತಮ್ಮ ವೈಫಲ್ಯ ಚರ್ಚಿಸಬಾರದು ಅಂತ ಆರ್ ಎಸ್ ಎಸ್ ವಿಚಾರ ತೆಗೆದಿದ್ದಾರೆ. ಸಂವಿಧಾನದ ಬಗ್ಗೆ ಕಾಂಗ್ರೆಸ್ನಂತೆ ನಾವು ಅಪಹಾಸ್ಯ ಮಾಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.