ರಾಮನಗರ : ಇಂದು ನಾಡಿನದ್ಯಂತ ಗಣೇಶ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದ್ದೂ, ಅದೇ ರೀತಿಯಾಗಿ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ಗ್ರಾಮದ ನಿವಾಸದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಗೌರಿ, ಗಣೇಶ ಹಬ್ಬವನ್ನು ಆಚರಿಸಿದರು.
ಇಂದು ಬಿಡದಿಯ ತಮ್ಮ ನಿವಾಸದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಗೌರಿ, ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ವಿಘ್ನೇಶ್ವರನ ಅನುಗ್ರಹದಿಂದ ಸಮಸ್ತರಿಗೂ ಒಳ್ಳೆಯದಾಗಲಿ. ಎಲ್ಲೆಡೆ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪ್ರಾರ್ಥಿಸಿದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬ ಸಮೇತರಾಗಿ ಸ್ವಗ್ರಾಮದಲ್ಲಿ ಗಣೇಶ ಹಬ್ಬವನ್ನು ಸಂಭ್ರಮಿಸಿದರು. ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಚತುರ್ಥಿಯ ಶುಭಾಶಯ ಕೋರಿದರು. ಪ್ರಥಮ ಪೂಜಿತ ವಿನಾಯಕನು ಪ್ರತಿಯೊಬ್ಬರ ಕಷ್ಟಗಳನ್ನು ನಿವಾರಿಸಿ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ಮತ್ತು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಕುಮಾರಸ್ವಾಮಿ ಪ್ರಾರ್ಥಿಸಿದರು.
ಬೆಂಗಳೂರಿನ ನನ್ನ ನಿವಾಸದಲ್ಲಿ ಹಾಗೂ ಬಿಡದಿಯ ತೋಟದಲ್ಲಿ ಶ್ರೀ ವಿನಾಯಕನ ಪೂಜೆ ನೆರವೇರಿಸಲಾಯಿತು. ಮತ್ತೊಮ್ಮೆ ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು ಮತ್ತು ಆ ಗಣಪನು ಸಕಲ ಕಷ್ಟಗಳನ್ನು ನಿವಾರಿಸಿ ಶುಭವುಂಟು ಮಾಡಲಿ ಎಂದು ಮನಸಾರೆ ಪ್ರಾರ್ಥಿಸುತ್ತೇನೆ.#GaneshChaurthi pic.twitter.com/0isPrBtozj
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 7, 2024
ಶ್ರೀ ಗಣೇಶ ಚತುರ್ಥಿಯ ಹಬ್ಬದ ಅಂಗವಾಗಿ ಬಿಡದಿಯ ತೋಟದಲ್ಲಿ ವಿಘ್ನನಿವಾರಕ ವಿನಾಯಕನ ಪೂಜೆ ನೆರವೇರಿಸಲಾಯಿತು. #GaneshChaurthi pic.twitter.com/qN0xLi4N1r
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 7, 2024