ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-2025ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಬಜೆಟ್ 2024 ರ ನಂತರ ಅಗ್ಗವಾಗಲಿರುವ ವಿಷಯಗಳಲ್ಲಿ ಮೊಬೈಲ್ ಫೋನ್ಗಳು, ಚಾರ್ಜರ್ಗಳು ಸೇರಿವೆ, ಅವುಗಳ ಮೇಲೆ 15% ಕಸ್ಟಮ್ ಸುಂಕವನ್ನು ಕಡಿತಗೊಳಿಸಲಾಗಿದೆ.
ಕ್ಯಾನ್ಸರ್ ಔಷಧಿಗಳು ಮತ್ತು ಮೊಬೈಲ್ ಫೋನ್ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಕಟಿಸಿದ್ದಾರೆ. ಹೆಚ್ಚುವರಿಯಾಗಿ, ಆಮದು ಮಾಡಿದ ಚಿನ್ನ, ಬೆಳ್ಳಿ, ಚರ್ಮದ ಸರಕುಗಳು ಮತ್ತು ಸಮುದ್ರಾಹಾರದ ಬೆಲೆಯೂ ಕಡಿಮೆಯಾಗುವ ನಿರೀಕ್ಷೆಯಿದೆ.
ಈ ವಸ್ತುಗಳ ಬೆಲೆ ಇಳಿಕೆ
ಮೊಬೈಲ್ ಫೋನ್ಗಳು
ಮೊಬೈಲ್ ಫೋನ್ಗಳು, ಮೊಬೈಲ್ ಚಾರ್ಜರ್ ಗಳು ಮತ್ತು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ (ಪಿಸಿಬಿಎ) ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.20ರಿಂದ ಶೇ.15ಕ್ಕೆ ಇಳಿಸಲಾಗಿದೆ. ಇದರಿಂದ ದೇಶದಲ್ಲಿ ಮೊಬೈಲ್ ಫೋನ್ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.
ಎಕ್ಸ್-ರೇ ಟ್ಯೂಬ್ಗಳು
ಎಕ್ಸ್-ರೇ ಯಂತ್ರಗಳಲ್ಲಿ ಬಳಸುವ ಎಕ್ಸ್-ರೇ ಟ್ಯೂಬ್ಗಳು ಮತ್ತು ಫ್ಲಾಟ್ ಪ್ಯಾನಲ್ ” ಡಿಟೆಕ್ಟರ್ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸಹ ಶೇ.15ರಿಂದ ಶೇ.5ಕ್ಕೆ ಕಡಿಮೆ ಮಾಡಲಾಗಿದೆ.
ಕ್ಯಾನ್ಸರ್ ಔಷಧಿಗಳು
ಸರ್ಕಾರವು 3 ಜೀವರಕ್ಷಕ ಕ್ಯಾನ್ಸರ್ ಔಷಧಿಗಳಿಗೆ ಕಸಮ್ ಸುಂಕದಿಂದ ವಿನಾಯಿತಿ ನೀಡಿದೆ. ಅವುಗಳ ಬೆಲೆಯನ್ನು ಇಳಿಸಿ ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವಂತೆ ಮಾಡಿದೆ. ಅಸ್ಟ್ರಾಜೆನೆಕಾದಿಂದ ತಯಾರಿಸಲ್ಪ ಡುವ 3 ಕ್ಯಾನ್ಸರ್ ಔಷಧಿಗಳಾದ ಟ್ರಾಸ್ಟುಜು ಮಾಬ್ ಡೆರಕ್ಸ್ಟೆಕನ್, ಒಸಿಮೆರ್ಟಿನಿಬ್ ಮತ್ತು ದುರ್ವಾಲುಮಾಬ್ಗೆ ಮೊದಲು ಶೇ.10 ಆಮದು ತೆರಿಗೆ ಇತ್ತು. ಈಗ ಇದರಿಂದ ಅವುಗಳಿಗೆ ವಿನಾಯ್ತಿ ಲಭ್ಯ ಆಗಿದ್ದು, ಅಗ್ಗವಾಗಲಿವೆ.
ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ
ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ಕ್ಕೆ ಇಳಿಸಲಾಗಿದ್ದು, ಪ್ಲಾಟಿನಂ ಮೇಲಿನ ಸುಂಕವನ್ನು ಶೇ.6.4ಕ್ಕೆ ಇಳಿಸಲಾಗಿದೆ. ಈ ಮುನ್ನ ಇವುಗಳ ಮೇಲಿನ ಆಮದು ಸುಂಕ ಶೇ.15ರಷ್ಟಿತ್ತು. ಪ್ಲಾಟಿನಂ, ಪಲ್ಲಾಡಿಯಂ, ಸೇರಿ ಕೆಲವು ವಸ್ತುಗಳ ಮೇಲೆ ಇದ್ದ ಶೇ.14.35ರ ಸುಂಕವನ್ನು ಶೇ.5.35ಕ್ಕೆ ಇಳಿಸಲಾಗಿದೆ.
ಮೀನಿನ ಆಹಾರ, ಸೀಗಡಿ
ಮೀನಿನ ಆಹಾರ ಮತ್ತು ಸೀಗಡಿಗಳ ಮೇಲಿನ ಬಿಸಿಡಿಯನ್ನು ಶೇ.5ಕ್ಕೆ ಇಳಿಸಲಾಗಿದೆ.
ಚರ್ಮದ ಸಾಮಗ್ರಿಗಳು
ಉಡುಪು, ಚೀಲ ಹಾಗೂ ಶೂ ಉತ್ಪಾದನೆ ಯಲ್ಲಿ ಬಳಸಲಾಗುವ ಚರ್ಮದ ವಸ್ತುಗಳ ಮೇಲಿನ ಸುಂಕ ಕೂಡ ಕಡಿಮೆಯಾಗಿದೆ.
25 ಖನಿಜಗಳು
ಇದೇ ವೇಳೆ 25 ಖನಿಜಗಳ ಮೇಲಿನ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗಿದೆ. ಇವುಗಳಲ್ಲಿ ಕಫಬಾಲ್ಟ್, ತಾಮ್ರ, ಲೀಥಿಯಂ- ಮೊದಲಾದವು ಇದ್ದು, ಇವು ಎಲೆಕ್ನಿಕ್ ಕಾರುಗಳ ಉತ್ಪಾದನೆಗೆ ತಯಾರಿಕೆಗೆ ಬೇಕಾದ ಖನಿಜಗಳಾಗಿವೆ. ಇದರಿಂದ ಎಲೆಕ್ನಿಕ್ ವಾಹನ ಉತ್ಪಾದನಾ ವೆಚ್ಚ ಕೊಂಚ ಇಳಿಯಲಿದೆ. ಇದೇ ವೇಳೆ, ಹಾಗೂ ಸೌರ ಫಲಕಗಳ ತಯಾರಿಕೆಗೆ ಬೇಕಾದ ಸೋಲಾರ್ ಸೆಲ್ ಮೇಲಿನ ಸುಂಕಕ್ಕೂ ವಿನಾಯ್ತಿ ನೀಡಲಾಗಿದೆ.
ಈ ವಸ್ತುಗಳ ಬೆಲೆ ಏರಿಕೆ
ಪ್ಲಾಸ್ಟಿಕ್ ವಸ್ತುಗಳು
ಪ್ಲಾಸ್ಟಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.25ಕ್ಕೆ ಹೆಚ್ಚಿಸ ಲಾಗಿದೆ. ಇದರರ್ಥ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ಲಾಸ್ಟಿಕ್ ವಸ್ತುಗಳು ದುಬಾರಿಯಾಗುತ್ತವೆ.
ಟೆಲಿಕಾಂ ಉಪಕರಣಗಳು
ನಿರ್ದಿಷ್ಟಪಡಿಸಿದ ಟೆಲಿಕಾಂ ಉಪಕರಣಗಳ ಆಮದು ಸುಂಕವನ್ನು ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಲಾಗಿದೆ.