ಬೆಂಗಳೂರು: 2025-26ನೇ ಸಾಲಿನ ಬಜೆಟ್ ನಲ್ಲಿ ಕರ್ನಾಟಕದ ರೈಲ್ವೆ ಜಾಲಕ್ಕೆ 7,564 ಕೋಟಿ ರೂ.ಅನುದಾನ ಘೋಷಣೆ ಮಾಡಿದ್ದಾರೆ ಎಂದು ಸೋಮಣ್ಣ ಹೇಳಿದರು.
ದೀರ್ಘಕಾಲದಿಂದ ಬಾಕಿ ಇರುವ ಭೂಸ್ವಾಧೀನವನ್ನು ರಾಜ್ಯ ಸರ್ಕಾರ ತ್ವರಿತಗೊಳಿಸಿದರೆ, ರೈಲ್ವೆ ರಾಜ್ಯದಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡಲು ಸಿದ್ಧವಾಗಿದೆ ಎಂದು ಸೋಮಣ್ಣ ಹೇಳಿದರು.
ಭೂಸ್ವಾಧೀನದಲ್ಲಿನ ವಿಳಂಬ ಮತ್ತು ರೈಲ್ವೆ ಮಂಡಳಿಯೊಂದಿಗಿನ ವೆಚ್ಚ ಹಂಚಿಕೆ ಒಪ್ಪಂದದ ಪ್ರಕಾರ ರಾಜ್ಯ ಸರ್ಕಾರವು ಹಣವನ್ನು ಬಿಡುಗಡೆ ಮಾಡುವಲ್ಲಿನ ವಿಳಂಬದಿಂದಾಗಿ ರಾಜ್ಯದಲ್ಲಿ ಹಲವಾರು ರೈಲ್ವೆ ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದು ಅವರು ಹೇಳಿದರು.
ಹೊಸ ಮಾರ್ಗಗಳ ನಿರ್ಮಾಣಕ್ಕೆ ಅನುದಾನ ವಿವರ: ಗದಗ-ವಾಡಿ: 549 ಕೋಟಿ ರೂ., ತುಮಕೂರು-ಚಿತ್ರದುರ್ಗ-ದಾವಣಗೆರೆ: 549 ಕೋಟಿ ರೂ., ಕಲ್ಯಾಣದುರ್ಗ ಮೂಲಕ ರಾಯದುರ್ಗ-ತುಮಕೂರು: 434 ಕೋಟಿ ರೂ., ಬಾಗಲಕೋಟೆ-ಕುಡಚಿ: 428 ಕೋಟಿ ರೂ., ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು: 64 ಕೋಟಿ ರೂ.
ಹುಬ್ಬಳ್ಳಿ ಮಾರ್ಗವಾಗಿ ಹೊಸಪೇಟೆ-ವಾಸ್ಕೋ ಡಿ ಗಾಮಾ: 413 ಕೋಟಿ ರೂ.,
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು: 64 ಕೋಟಿ ರೂ., ಧಾರವಾಡ-ಬೆಳಗಾವಿ: 8 ಕೋಟಿ ರೂ., ಹುಬ್ಬಳ್ಳಿ-ಅಂಕೋಲಾ: 4 ಕೋಟಿ ರೂ.
ಹುಬ್ಬಳ್ಳಿ ಮೂಲಕ ಹೊಸಪೇಟೆ-ವಾಸ್ಕೋ ಡಿ ಗಾಮಾ ಮಾರ್ಗ: 413 ಕೋಟಿ ರೂ., ಹೊಟಗಿ-ಕೂಡಗಿ-ಗದಗ: 401 ಕೋಟಿ ರೂ., ಪುಣೆ-ಮಿರಜ್-ಲೋಂಡಾ: 312 ಕೋಟಿ ರೂ., ಬೈಯಪ್ಪನಹಳ್ಳಿ-ಹೊಸೂರು: 223 ಕೋಟಿ ರೂ., ಯಶವಂತಪುರ-ಚನ್ನಸಂದ್ರ: 178 ಕೋಟಿ ರೂ., ತೋರಣಗಲ್ಲು-ರಂಜಿತ್ಪುರ: 104 ಕೋಟಿ ರೂ. ಆಗಿದೆ.