ವಿಜಯಪುರ: ಜಿಲ್ಲೆಯಲ್ಲಿ ಜಮೀನಿನ ವಿಚಾರಕ್ಕೆ ದಾಯಾದಿಗಳ ಮಧ್ಯೆ ಉಂಟಾದಂತ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿದೆ. ಜಮೀನಿನ ವಿಚಾರಕ್ಕೆ ಅಣ್ಣನ ಮಗನನ್ನೇ ಕೊಡಲಿಯಿಂದ ಬರ್ಬರವಾಗಿ ಚಿಕ್ಕಪ್ಪ ಕೊಲೆಗೈದಿದ್ದಾನೆ.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶಿರಾಡೋಣದಲ್ಲಿ ದಾಯಾದಿಗಳ ಮಧ್ಯದಲ್ಲಿ ಜಗಳ ಉಂಟಾಗಿದೆ. ಈ ಜಗಳದಲ್ಲಿ ಕೊಡಲಿಯಿಂದ ಕೊಚ್ಚಿ ಬೀರಪ್ಪ ಸೀರೆಪ್ಪ ಸಲಗರ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಜಮೀನಿನ ವಿಚಾರವಾಗಿ ಉಂಟಾದಂತ ಜಗಳ ತಾರಕಕ್ಕೇರಿದಂತ ಸಂದರ್ಭದಲ್ಲಿ ಅಣ್ಣನ ಮಗ ಬೀರಪ್ಪನನ್ನು ಚಿಕ್ಕಪ್ಪ ಆಮಸಿದ್ದ ಸಲಗರ ಕೊಡಲಿಯಿಂದ ಕೊಚ್ಚಿ ಕೊಲೆ ಗೈದಿದ್ದಾನೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿಂದು 57 ಜನರಿಗೆ ಕೊರೋನಾ ಪಾಸಿಟೀವ್: ಸೋಂಕಿಗೆ ಇಬ್ಬರು ಬಲಿ | Covid19 Update
ಕಾಲ್ತುಳಿತ ದುರಂತ: ಎಲ್ಲದಕ್ಕೂ ಮೂಗು ತೂರಿಸುವ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ?- ಶೋಭಾ ಕರಂದ್ಲಾಜೆ ಪ್ರಶ್ನೆ