ತುಮಕೂರು: PFI ಸಂಘಟನೆ ನಿಷೇಧ ಹಿನ್ನೆಲೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಗ್ರಾಸವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ವ್ಯಕ್ತಿ ಅನೈತಿಕ ಸಂಬಂಧ ಇಟ್ಟುಕೊಳ್ಳಲು ಈ ಅಂಶವೇ ಪ್ರಮುಖ ಕಾರಣವಂತೆ…! | Relationship
ತುಮಕೂರಿನಲ್ಲಿ ಈ ವಿಚಾರವಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಆರ್ ಎಸ್ ಎಸ್ ಸ್ವಾತಂತ್ರ್ಯ ಬರುವ ಮುಂಚೆನೇ ಹುಟ್ಟಿತ್ತು. ನಾನು ಕೂಡ ಆರ್ ಎಸ್ ಎಸ್ ನವನು. ನಾನೇನಾದ್ರೂ ತಪ್ಪು ಮಾಡಿದರೆ ನೀವು ಹೇಳಿದವರ ಮನೆ ಮುಂದೆ ಕಸ ಗುಡಿಸುತ್ತೇನೆ. ಅವನು ಸಿದ್ದರಾಮಯ್ಯ ಕಸ ಗುಡಿಸುವುದು ಬೇಡ. ನಾನು ಆರ್ಎಸ್ಎಸ್. ಯಾರಿಗದ್ರೂ ಗುಂಡು ಹೊಡೆದಿದ್ದೀನಾ. ಹಾಗಾದ್ರೆ ಏಕೆ ಬ್ಯಾನ್ ಮಾಡ್ಬೇಕು. ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಸಮುನದಾಯದ ವೋಟ್ ಬೇಕು. ಹಾಗಾಗಿ ಬ್ಯಾನ್ ಮಾಡ್ಬೇಕು ಅಂತಾ ಹೇಳ್ತಾರೆ ಎಂದು ತಿರುಗೇಟು ನೀಡಿದರು.
ವ್ಯಕ್ತಿ ಅನೈತಿಕ ಸಂಬಂಧ ಇಟ್ಟುಕೊಳ್ಳಲು ಈ ಅಂಶವೇ ಪ್ರಮುಖ ಕಾರಣವಂತೆ…! | Relationship
ಕನಕದಾಸ ಕುಲ ಕುಲ ಎಂದು ಯಾಕ್ ಹೊಡೆದಾಡುತ್ತಿರಾ ಎಂದು ಕಿವಿಯಲ್ಲಿ ತುರುಕಿದ್ರು ಸಿದ್ದರಾಮಯ್ಯ ಗೆ, ಅರ್ಥ ಆಗ್ತಿಲ್ಲ, ಆ ಮನುಷ್ಯನಿಗೆ ಸಾಬ್ರು ವೋಟ್ ಬೇಕು ಅಷ್ಟೇ. ಸಿದ್ದರಾಮಯ್ಯನವರು ತುಮಕೂರಿಗೆ ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ನಾನೊಬ್ಬ ಹಿಂದೂ ಅವರು ಇಲ್ಲಿಗೆ ಬಂದು ನಿಂತುಕೊಳ್ಳಲಿ. ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಎಲ್ಲಿ ಬೇಕಾದ್ರೂ ನಿಲ್ಲಬಹುದು, ತುಮಕೂರಿನಲ್ಲಿ ಸ್ಪರ್ಧೆ ಮಾಡಲಿ ಎಂದು ಸಿದ್ದರಾಮಯ್ಯಗೆ ಶಿವಣ್ಣ ಪಂಥಹ್ವಾನ ನೀಡಿದರು.
ಪಿಎಫ್ ಐ ಸಂಘನೆ ಬ್ಯಾನ್ ಸ್ವಾಗತಾರ್ಹ. ಕೇವಲ ಬ್ಯಾನ್ ಮಾಡಿದ್ರೆ ಆಗಲ್ಲ, ಎಲ್ಲಾರನ್ನು ಹುಡುಕಿ ಹುಡುಕಿ ಜೈಲ್ಗೆ ಹಾಕ್ಬೇಕು.ಓವೈಸಿಯನ್ನು ಬ್ಯಾನ್ ಮಾಡ್ಬೇಕು. ನಿಜವಾದ ಕಾಂಗ್ರೆಸ್ ಗಾಂಧಿ, ಗೋಖಲೆ ಅವರದ್ದು. ಈಗ ಇರುವಂತಹದ್ದು ನೆಹರು ಕಾಂಗ್ರೆಸ್ ಎಂದು ಕಿಡಿಕಾರಿದರು