ಉಜ್ಜಯಿನಿ: ಭಾರತದಾದ್ಯಂತ ಹಲವಾರು ದೇವಾಲಯಗಳಿವೆ. ಅಲ್ಲಿ ನೀವು ದೇವರಿಗೆ ಹಣ್ಣುಗಳಿಂದ ಮಾಡಿದ ವಿಶಿಷ್ಟವಾದ ಪ್ರಸಾದವನ್ನು ನೋಡಬಹುದು. ಆದ್ರೆ,
ಮಧ್ಯಪ್ರದೇಶದ ಉಜ್ಜಯಿನಿಯ ಭಗ್ತಿಪುರ ಪ್ರದೇಶದಲ್ಲಿ ನೆಲೆಗೊಂಡಿರುವ 56 ಭೈರವ ದೇವಾಲಯಗಳಲ್ಲಿ ಬುಧವಾರ ಸಂಜೆ ಭೈರವನಾಥನಿಗೆ ಮದ್ಯ, ಸಿಗರೇಟ್ ಸೇರಿದಂತೆ 1,351 ಬಗೆಯ ಖಾದ್ಯಗಳನ್ನು ಅರ್ಪಿಸಲಾಯಿತು.
ಭೈರವ ಅಷ್ಟಮಿಯಂದು ಮಧ್ಯಪ್ರದೇಶದ ಉಜ್ಜಯಿನಿಯ ಭಾಗ್ತಿಪುರದಲ್ಲಿರುವ 56 ಭೈರವ ದೇವಾಲಯದಲ್ಲಿ ಬುಧವಾರ ಸಂಜೆ ಭೈರವನಾಥನಿಗೆ ಮದ್ಯ, ಸಿಗರೇಟ್ ಸೇರಿದಂತೆ 1,351 ಬಗೆಯ ಖಾದ್ಯಗಳನ್ನು ಅರ್ಪಿಸಲಾಯಿತು.
ಉಜ್ಜಯಿನಿಯ ಕಾಲ ಭೈರವ ದೇವಾಲಯದಲ್ಲಿ ಮದ್ಯವನ್ನು ಅರ್ಪಿಸುವ ಸಂಪ್ರದಾಯವಿದೆ. ಪ್ರಾಚೀನ ಕಾಲದಿಂದಲೂ ಇಲ್ಲಿ ಭೈರವ ಅಷ್ಟಮಿಯನ್ನು ಆಚರಿಸಲಾಗುತ್ತದೆ. ಆದ್ದರಿಂದ ಭೈರವ್ ಬಾಬಾನನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು ಮತ್ತು ಪೂಜೆಯ ನಂತರ ಭಕ್ತರಿಗೆ ಆ ಪ್ರಸಾದವನ್ನು ನೀಡಲಾಯಿತು.
ಮಹಾಭೋಗ್ನಲ್ಲಿ ನೀಡಲಾದ 1,351 ವಿಧದ ಖಾದ್ಯಗಳಲ್ಲಿ ವಿವಿಧ ರೀತಿಯ ಮದ್ಯ, ಸಿಗರೇಟ್ ಕೂಡ ಸೇರಿವೆ. ಭಕ್ತರು ಮಹಾಭೋಗಕ್ಕೆ ಪದಾರ್ಥಗಳನ್ನು ಭೈರವನಾಥನಿಗೆ ಅರ್ಪಿಸಿದ ನಂತ್ರ, ಅದನ್ನು ಭಕ್ತರಿಗೆ ಹಂಚಲಾಗುತ್ತದೆ.
ವರದಿಯ ಪ್ರಕಾರ, 390 ಬಗೆಯ ಅಗರಬತ್ತಿಗಳು, 180 ಬಗೆಯ ಮುಖವಾಡಗಳು, 75 ಬಗೆಯ ಒಣ ಹಣ್ಣುಗಳು, 64 ಬಗೆಯ ಚಾಕೊಲೇಟ್ಗಳು, 60 ಬಗೆಯ ಗುಜರಾತಿ ನಮ್ಕೀನ್ಗಳು, 60 ಬಗೆಯ ಸ್ಯಾಚೆಟ್ ಸಿಗರೇಟ್, 56 ಬಗೆಯ ತಿಂಡಿ, 55 ಬಗೆಯ ಸಿಹಿತಿಂಡಿ, ವಿವಿಧ ಬಗೆಯ 45 ಬಿಸ್ಕತ್ತು, 40 ಬಗೆಯ ಮದ್ಯ (ರಮ್, ವಿಸ್ಕಿ, ಟಕಿಲಾ, ವೋಡ್ಕಾ ಬಿಯರ್ ಮತ್ತು ಶಾಂಪೇನ್), ಚಿಲ್ಲಮ್, ಗಾಂಜಾ, 40 ಬಗೆಯ ಬೇಕರಿ ವಸ್ತುಗಳು ಮತ್ತು 30 ಬಗೆಯ ಗಜಕ್, 28 ಬಗೆಯ ತಂಪು ಪಾನೀಯಗಳು ಮತ್ತು 28 ಬಗೆಯ ಹಣ್ಣುಗಳನ್ನು ಭೈರವನಾಥನಿಗೆ ಅರ್ಪಿಸಲಾಯಿತು.
ನಂಬಿಕೆಯ ಪ್ರಕಾರ, ಈ ದಿನದಂದು ಬಾಬಾ ಭೈರವನಾಥನನ್ನು ಪೂಜಿಸಿದ ನಂತರ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನಲಾಗಿದೆ.
ಹೇಳೋರಿಲ್ಲ, ಕೇಳೋರಿಲ್ಲ: ಮಧ್ಯಪ್ರದೇಶದ ಜಿಲ್ಲಾಸ್ಪತ್ರೆ ಐಸಿಯು ಒಳಗೆ ಹಸು ಓಡಾಟ | WATCH VIDEO
BIGG NEWS : ಇಂದು ಸಂಜೆ ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಸಿಎಂ ಬೊಮ್ಮಾಯಿ ಚಾಲನೆ|Kadlekai Parishe
ಹೇಳೋರಿಲ್ಲ, ಕೇಳೋರಿಲ್ಲ: ಮಧ್ಯಪ್ರದೇಶದ ಜಿಲ್ಲಾಸ್ಪತ್ರೆ ಐಸಿಯು ಒಳಗೆ ಹಸು ಓಡಾಟ | WATCH VIDEO