ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) ಯುಜಿಸಿ ನೆಟ್ 2024 ಪರೀಕ್ಷೆಯ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ನೋಂದಾಯಿತ ಅಭ್ಯರ್ಥಿಗಳು ಯುಜಿಸಿ ನೆಟ್ 2024 ಪರೀಕ್ಷೆಯ ಪ್ರವೇಶ ಪತ್ರವನ್ನು ( UGC NET 2024 exam admit card ) ಅಧಿಕೃತ ವೆಬ್ಸೈಟ್ – ugcnet.nta.ac.in ರಿಂದ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ.
ಯುಜಿಸಿ ನೆಟ್ ಜೂನ್ 2024 ಹಾಲ್ ಟಿಕೆಟ್ ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆಗಳು ಮತ್ತು ಹುಟ್ಟಿದ ದಿನಾಂಕದ ಮೂಲಕ ವೆಬ್ಸೈಟ್ಗೆ ಲಾಗ್ ಇನ್ ಆಗಬೇಕು.
ಯುಜಿಸಿ ನೆಟ್ 2024ರ ಪರೀಕ್ಷೆಯನ್ನು ಜೂನ್ 18 ರಂದು ಎರಡು ಪಾಳಿಗಳಲ್ಲಿ ನಡೆಸಲಾಗುವುದು. 42 ವಿಷಯಗಳಿಗೆ ಯುಜಿಸಿ ನೆಟ್ ಪರೀಕ್ಷೆಯನ್ನು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ಮತ್ತು 41 ವಿಷಯಗಳಿಗೆ ಎರಡನೇ ಪಾಳಿಯಲ್ಲಿ ಮಧ್ಯಾಹ್ನ 3:30 ರಿಂದ ಸಂಜೆ 6:30 ರವರೆಗೆ ಪರೀಕ್ಷೆ ನಡೆಯಲಿದೆ.
ಎರಡೂ ಪತ್ರಿಕೆಗಳ ಒಟ್ಟು ಅವಧಿ ಮೂರು ಗಂಟೆಗಳು. ಎರಡೂ ಪತ್ರಿಕೆಗಳು ವಸ್ತುನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯೂ) ಒಳಗೊಂಡಿರುತ್ತವೆ. ಪೇಪರ್ 1 ರಲ್ಲಿ 50 ಪ್ರಶ್ನೆಗಳು ಮತ್ತು ಪೇಪರ್ 2 ರಲ್ಲಿ 100 ಪ್ರಶ್ನೆಗಳು ಸೇರಿದಂತೆ ಒಟ್ಟು 150 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯಲ್ಲಿ ಯಾವುದೇ ನಕಾರಾತ್ಮಕ ಅಂಕಗಳಿಲ್ಲ.
ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ, ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಿ
ಹಂತ 1: ಯುಜಿಸಿ ನೆಟ್ ಅಧಿಕೃತ ವೆಬ್ಸೈಟ್ಗೆ ಹೋಗಿ – ugcnet.nta.ac.in
ಹಂತ 2: ಮುಖಪುಟದಲ್ಲಿ ನೀಡಲಾದ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 3: ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್ ವರ್ಡ್ ನಂತಹ ವಿವರಗಳನ್ನು ಒದಗಿಸಿ
ಹಂತ 4: ನಿಮ್ಮ ಪ್ರವೇಶ ಪತ್ರವು ನಿಮ್ಮ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ
ಹಂತ 5: ಪ್ರವೇಶ ಪತ್ರದ ಪ್ರಿಂಟ್ಔಟ್ ತೆಗೆದುಕೊಳ್ಳಿ
ಭಾರತದಲ್ಲಿ ಈ ಆಹಾರಗಳ ಸೇವನೆ ನಿಷೇಧ : ಇಲ್ಲಿದೆ ನೋಡಿ ʻFSSAIʼ ನ ನಿಷೇಧಿತ ಆಹಾರಗಳ ಪಟ್ಟಿ | Banned Foods