ಉಗಾಂಡಾ: ಉಗಾಂಡಾದ ಕಿಸೊರೊ ಪಟ್ಟಣದಲ್ಲಿ 24 ವರ್ಷದ ಭಾರತೀಯ ಉದ್ಯಮಿಯೊಬ್ಬರನ್ನು ಪೊಲೀಸ್ ಪೇದೆಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಮೃತರನ್ನು ಕುಂತಾಜ್ ಪಟೇಲ್ ಎಂದು ಗುರುತಿಸಲಾಗಿದೆ. ಫೀಲ್ಡ್ ಫೋರ್ಸ್ ಯುನಿಟ್ (ಎಫ್ಎಫ್ಯು) ದ ಪೊಲೀಸ್ ಪೇದೆ ಎಲಿಯೊಡಾ ಗುಮಿಜಮು ಎಂಬಾತ ಅಕ್ಟೋಬರ್ 27 ರಂದು ಮುಖ್ಯ ರಸ್ತೆಯಲ್ಲಿ ಅಪರಾಧ ನಡೆದ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಹಿಡಿದು ಪೊಲೀಸರಿಗೆ ಒಪ್ಪಿಸಿಸಲಾಗಿದೆ ಎಂದು ಡೈಲಿ ಮಾನಿಟರ್ ಪತ್ರಿಕೆ ವರದಿ ಮಾಡಿದೆ.
ಎಲೆಕ್ಟ್ರಿಕ್ ವಸ್ತುಗಳನ್ನು ಕೊಂಡುಒಳ್ಳುವ ಸಲುವಾಗಿ ಆರೋಪಿ ಪೇದೆ ಸೇರಿದಂತೆ ಕೆಲವರು ಭಾರತೀಯ ಅಂಗಡಿಗೆ ನುಗ್ಗಿದ್ದರು. ಈ ವೇಳೆ ಘಟನೆ ನಡೆದಿದ್ದು, ಭಾರತೀಯ ಉದ್ಯಮಿಯ ಎದೆಗೆ ಗುಂಡು ಹಾರಿಸಿದ್ದರು ಎಂದು ಪ್ರಾದೇಶಿಕ ಪೊಲೀಸ್ ವಕ್ತಾರ ಎಲ್ಲಿ ಮಾತೆ ಹೇಳಿದ್ದಾರೆ.
ವರದಿಯ ಬಗ್ಗೆ ಕೀನ್ಯಾ ಸರ್ಕಾರ ಅಧಿಕೃತವಾಗಿ ಏನನ್ನೂ ಹೇಳಿಲ್ಲ ಎಂದು ತಿಳಿದುಬಂದಿದೆ.
ಕೀನ್ಯಾದಲ್ಲಿರುವ ಭಾರತೀಯ ಹೈಕಮಿಷನರ್ ನಮ್ಗ್ಯಾ ಖಂಪಾ ಅವರು ಕೀನ್ಯಾ ಅಧ್ಯಕ್ಷ ವಿಲಿಯಂ ಸಮೋಯಿ ರುಟೊ ಅವರನ್ನು ಭೇಟಿಯಾಗಿ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Shocking News ; ಕೋಲ್ಕತ್ತಾದಲ್ಲಿ ‘ಮಾಂಸ ತಿನ್ನುವ ಬ್ಯಾಕ್ಟೀರಿಯಾ ಸೋಂಕಿಗೆ’ ವ್ಯಕ್ತಿಯೋರ್ವ ಬಲಿ