ಬೆಂಗಳೂರು: ನಾಳೆ ಹಿಂದೂಗಳ ಹೆಮ್ಮೆಯ ಹಬ್ಬದ ಯುಗಾದಿಯನ್ನು ಆಚರಣೆ ಮಾಡಲಾಗುತ್ತದೆ. ಈ ನಡುವೆ ಹಬ್ಬದ ಸಡಗರಕ್ಕೆ ಅವಶ್ಯಕತೆ ಇರುವ ವಸ್ತುಗಳನ್ನು ಖರೀದಿ ಮಾಡಲು ಹಲವು ಮಂದಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ.
ಹೂ, ಹಣ್ಣುಗಳ ಖರೀದಿ ಭರಾಟೆ ಕೂಡ ಹೆಚ್ಚಾಗಿದೆ. ಆದರೆ ಈ ನಡುವೆ ಯುಗಾದಿ ಹಬ್ಬಕ್ಕೆ ಹೂವಿನ ಬೆಲೆ ಗಗನಕ್ಕೇರಿದೆ. ಹೂವಿನ ಬೆಲೆಗಳನ್ನ ಕೇಳಿ ಗ್ರಾಹಕರು ಕಂಗಾಲಾಗಿದ್ದಾರೆ. ಕನಕಾಂಬರ ಮಾರು 600ರೂ, ಸೇವಂತಿ ಮಾರು 300ರೂ, ಮಲ್ಲಿಗೆ ಹೂವಿನ ಒಂದು ದಿಂಡಿಗೆ 200ರೂ, ಮಾವಿನ ಎಲೆ, ಬೇವಿನ ಎಲೆ ಒಂದು ಕಟ್ಟು 25-30 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.ಏಲಕ್ಕಿ ಬಾಳೆ ಹಣ್ಣು ಕಿಲೋಗೆ 80 ರೂಪಾಯಿ, ಆಪಲ್ ಕಿಲೋಗೆ 300- 350 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.