Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಕತ್ತು ಕಪ್ಪಾಗಿದೆಯೇ? ಚಿಂತೆ ಬೇಡ, ಅಡುಗೆ ಮನೆಯಲ್ಲೇ ಇದೆ ಮ್ಯಾಜಿಕ್ ಪರಿಹಾರ!

23/04/2026 10:44 AM

BIG NEWS : ಹಾವೇರಿಯಲ್ಲಿ ಭೀಕರ ಅಪಘಾತ : 2 ವಾಹನ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿ ಸಜೀವ ದಹನ!

23/04/2026 10:40 AM

BREAKING : ಬಳ್ಳಾರಿಯ ಹೋಟೆಲ್ ನಲ್ಲಿ ಸಿಲಿಂಡರ್ ಸ್ಪೋಟ : ಬಾಲಕನಿಗೆ ಗಂಭೀರ ಗಾಯ!

23/04/2026 10:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಲಮಂಡಳಿಯಿಂದ ಯುಗಾದಿ ಗಿಫ್ಟ್ : ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ (𝗢𝗧𝗦) ಯೋಜನೆ ಜಾರಿ- ಡಿಸಿಎಂ ಡಿ.ಕೆ. ಶಿವಕುಮಾರ್
KARNATAKA

ಜಲಮಂಡಳಿಯಿಂದ ಯುಗಾದಿ ಗಿಫ್ಟ್ : ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ (𝗢𝗧𝗦) ಯೋಜನೆ ಜಾರಿ- ಡಿಸಿಎಂ ಡಿ.ಕೆ. ಶಿವಕುಮಾರ್

By kannadanewsnow0921/03/2026 3:06 PM

ಬೆಂಗಳೂರು: ಸಿಲಿಕಾನ್ ಸಿಟಿ ನಾಗರೀಕರಿಗೆ ಜಲಮಂಡಳಿಯು ಯುಗಾದಿ ಉಡುಗೊರೆ ನೀಡಿದ್ದು, ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು, ಒನ್‌ ಟೈಮ್‌ ಸೆಟಲ್‌ಮೆಂಟ್‌ (𝗢𝗧𝗦 – 𝗢𝗻𝗲 𝗧𝗶𝗺𝗲 𝗦𝗲𝘁𝘁𝗹𝗲𝗺𝗲𝗻𝘁)*ಲ ಯೋಜನೆಯನ್ನು ಬರುವ ಏಪ್ರಿಲ್‌ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬೆಂಗಳೂರು ನಗರದ ಜನರಿಗೆ ಅನುಕೂಲ ಮಾಡಿಕೊಡಲು ಬಾಕಿ ಉಳಿಸಿಕೊಂಡಿರುವ ಬಿಲ್‌ ನ ಅಸಲು ಪಾವತಿಸಿದಲ್ಲಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಯೋಜನೆಯ ಹಿನ್ನಲೆ:

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (𝗕𝗪𝗦𝗦𝗕) ವ್ಯಾಪ್ತಿಯಲ್ಲಿರುವ ಸುಮಾರು 11 ಲಕ್ಷ ನೀರಿನ ಸಂಪರ್ಕಗಳ ಪೈಕಿ, 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯದ ಮಾಹಿತಿಯಂತೆ, ಒಟ್ಟು ಬಾಕಿ ಮೊತ್ತ ರೂ. 851.33 ಕೋಟಿಗಳಾಗಿದ್ದು, ಇದರಲ್ಲಿ ಅಸಲು ಮೊತ್ತ ರೂ. 539.43 ಕೋಟಿ ಹಾಗೂ ಬಡ್ಡಿ ರೂ. 311.90 ಕೋಟಿ ಸೇರಿದೆ.

ಬಾಕಿಯನ್ನು ಸುಲಭವಾಗಿ ಪಾವತಿಸಲು ಹಾಗೂ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು, ಏಪ್ರಿಲ್ 2026 ರಿಂದ ಜೂನ್ 2026 ರವರೆಗೆ (3 ತಿಂಗಳ ಅವಧಿ) ಈ 𝗢𝗧𝗦 ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಡಿಸಿಎಂ ಅವರು ತಿಳಿಸಿದ್ದಾರೆ.

ಯೋಜನೆಯ ಪ್ರಮುಖ ನಿಯಮಗಳು ಹಾಗೂ ಪ್ರಯೋಜನಗಳು:

ಶೇ. 100 ರಷ್ಟು ಬಡ್ಡಿ ಮನ್ನಾ:

ಈ 3 ತಿಂಗಳ ಯೋಜನೆ ಅವಧಿಯಲ್ಲಿ ಗ್ರಾಹಕರು ತಮ್ಮ ಅಸಲು ಮೊತ್ತವನ್ನು (𝗣𝗿𝗶𝗻𝗰𝗶𝗽𝗮𝗹) ಸಂಪೂರ್ಣವಾಗಿ ಪಾವತಿಸಿದರೆ, ಏಪ್ರಿಲ್ 2026ರವರೆಗೆ ಸಂಗ್ರಹವಾಗಿರುವ ಸಂಪೂರ್ಣ ಬಡ್ಡಿಯನ್ನು (ಶೇ. 100ರಷ್ಟು) ರಿಬೇಟ್ (𝗿𝗲𝗯𝗮𝘁𝗲) ರೂಪದಲ್ಲಿ ಮನ್ನಾ ಮಾಡಲಾಗುತ್ತದೆ.

ಯಾರಿಗೆಲ್ಲ ಅನ್ವಯ?:

ಈ ಯೋಜನೆಯು ಗೃಹ (𝗗𝗼𝗺𝗲𝘀𝘁𝗶𝗰), ವಾಣಿಜ್ಯ (𝗖𝗼𝗺𝗺𝗲𝗿𝗰𝗶𝗮𝗹), ಕೈಗಾರಿಕಾ (𝗜𝗻𝗱𝘂𝘀𝘁𝗿𝗶𝗮𝗹) ಸೇರಿದಂತೆ 𝗕𝗪𝗦𝗦𝗕 ಯ ಎಲ್ಲ ವರ್ಗದ ಗ್ರಾಹಕರಿಗೂ ಅನ್ವಯವಾಗಲಿದೆ. ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಬಾಕಿಗಳಿಗೂ ಲೆಕ್ಕಪತ್ರ ಸಮನ್ವಯದ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಪಾವತಿ ಪ್ರಕ್ರಿಯೆ:

ಗ್ರಾಹಕರಿಗೆ ಮಾಹಿತಿ ಒದಗಿಸುವ ಹಾಗೂ ಪಾವತಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ, 𝗕𝗪𝗦𝗦𝗕 ವತಿಯಿಂದ ಪ್ರತಿ ಬಾಕಿದಾರರಿಗೆ ಅವರ 𝗥𝗥 ಸಂಖ್ಯೆ, ಅಸಲು ಮೊತ್ತ, ಮನ್ನಾ ಆಗುವ ಬಡ್ಡಿ ಮೊತ್ತ ಹಾಗೂ ಪಾವತಿಸಬೇಕಾದ ಅಂತಿಮ ಮೊತ್ತದ ವಿವರಗಳನ್ನು ಒದಗಿಸಲಾಗುವುದು. ಗ್ರಾಹಕರು 𝗕𝗪𝗦𝗦𝗕 ಕಿಯೋಸ್ಕ್, ಆನ್‌ಲೈನ್ ಪೋರ್ಟಲ್ ಹಾಗೂ ವಿವಿಧ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಸುಲಭವಾಗಿ ಹಣ ಪಾವತಿಸಬಹುದು.

“ನಗರದ 5.11 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಆರ್ಥಿಕ ನೆರವು ನೀಡುವ ಹಾಗೂ ಮಂಡಳಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ದ್ವಿಮುಖ ಉದ್ದೇಶದಿಂದ ಈ ಯುಗಾದಿ ಕೊಡುಗೆಯನ್ನು ಜಾರಿಗೊಳಿಸಲಾಗುತ್ತಿದೆ. ಬರೋಬ್ಬರಿ 311 ಕೋಟಿ ರೂ.ಗಳ ಬಡ್ಡಿ ಮನ್ನಾ ಮಾಡುವ ಮೂಲಕ ನಾಗರಿಕರ ಮೇಲಿನ ಹೊರೆಯನ್ನು ಗಣನೀಯವಾಗಿ ಇಳಿಸಲಾಗುತ್ತಿದೆ. ಸಾರ್ವಜನಿಕರು ಮುಂಬರುವ 3 ತಿಂಗಳ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ನಿಮ್ಮ ಕತ್ತು ಕಪ್ಪಾಗಿದೆಯೇ? ಚಿಂತೆ ಬೇಡ, ಅಡುಗೆ ಮನೆಯಲ್ಲೇ ಇದೆ ಮ್ಯಾಜಿಕ್ ಪರಿಹಾರ!

23/04/2026 10:44 AM2 Mins Read

BIG NEWS : ಹಾವೇರಿಯಲ್ಲಿ ಭೀಕರ ಅಪಘಾತ : 2 ವಾಹನ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿ ಸಜೀವ ದಹನ!

23/04/2026 10:40 AM1 Min Read

BREAKING : ಬಳ್ಳಾರಿಯ ಹೋಟೆಲ್ ನಲ್ಲಿ ಸಿಲಿಂಡರ್ ಸ್ಪೋಟ : ಬಾಲಕನಿಗೆ ಗಂಭೀರ ಗಾಯ!

23/04/2026 10:36 AM1 Min Read
Recent News

ನಿಮ್ಮ ಕತ್ತು ಕಪ್ಪಾಗಿದೆಯೇ? ಚಿಂತೆ ಬೇಡ, ಅಡುಗೆ ಮನೆಯಲ್ಲೇ ಇದೆ ಮ್ಯಾಜಿಕ್ ಪರಿಹಾರ!

23/04/2026 10:44 AM

BIG NEWS : ಹಾವೇರಿಯಲ್ಲಿ ಭೀಕರ ಅಪಘಾತ : 2 ವಾಹನ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿ ಸಜೀವ ದಹನ!

23/04/2026 10:40 AM

BREAKING : ಬಳ್ಳಾರಿಯ ಹೋಟೆಲ್ ನಲ್ಲಿ ಸಿಲಿಂಡರ್ ಸ್ಪೋಟ : ಬಾಲಕನಿಗೆ ಗಂಭೀರ ಗಾಯ!

23/04/2026 10:36 AM

ಮಕ್ಕಳಲ್ಲಿನ ‘ಮಣ್ಣು ತಿನ್ನುವ ಚಟ’ಕ್ಕೆ ಇಲ್ಲಿದೆ ಸುಲಭ ಮನೆಮದ್ದು : ಪೋಷಕರೇ ಇತ್ತ ಗಮನಹರಿಸಿ

23/04/2026 10:26 AM
State News
KARNATAKA

ನಿಮ್ಮ ಕತ್ತು ಕಪ್ಪಾಗಿದೆಯೇ? ಚಿಂತೆ ಬೇಡ, ಅಡುಗೆ ಮನೆಯಲ್ಲೇ ಇದೆ ಮ್ಯಾಜಿಕ್ ಪರಿಹಾರ!

By kannadanewsnow5723/04/2026 10:44 AM KARNATAKA 2 Mins Read

ನಮ್ಮ ದೇಹದಲ್ಲಿ ಅತಿ ಹೆಚ್ಚು ಕೊಳೆ ಮತ್ತು ಬೆವರು ಸಂಗ್ರಹವಾಗುವ ಭಾಗವೆಂದರೆ ಅದು ಕತ್ತು. ಬೇಸಿಗೆ ಕಾಲದಲ್ಲಂತೂ ಧೂಳು, ಬೆವರು…

BIG NEWS : ಹಾವೇರಿಯಲ್ಲಿ ಭೀಕರ ಅಪಘಾತ : 2 ವಾಹನ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿ ಸಜೀವ ದಹನ!

23/04/2026 10:40 AM

BREAKING : ಬಳ್ಳಾರಿಯ ಹೋಟೆಲ್ ನಲ್ಲಿ ಸಿಲಿಂಡರ್ ಸ್ಪೋಟ : ಬಾಲಕನಿಗೆ ಗಂಭೀರ ಗಾಯ!

23/04/2026 10:36 AM

ಮಕ್ಕಳಲ್ಲಿನ ‘ಮಣ್ಣು ತಿನ್ನುವ ಚಟ’ಕ್ಕೆ ಇಲ್ಲಿದೆ ಸುಲಭ ಮನೆಮದ್ದು : ಪೋಷಕರೇ ಇತ್ತ ಗಮನಹರಿಸಿ

23/04/2026 10:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.