ದಿನಾಂಕ: 26.02.2024 ಆರಮನೆ ಮೈದಾನ ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿರುವ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ -2024 ಕ್ಕೆ ಸಂಬAಧಿಸಿದAತೆ ಮಾಹಿತಿ
• ರಾಜ್ಯ ಸರ್ಕಾರವು ಯುವ ಸಮೃದ್ಧಿ ಸಮ್ಮೇಳನದ – 2024 ನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಯೋಜಿಸಲಾಗಿರುತ್ತದೆ.
• ಕರ್ನಾಟಕದಲ್ಲಿ ಅಂದಾಜು ಪ್ರತಿ ವರ್ಷ ಪಿ.ಯು.ಸಿ.ಯಲ್ಲಿ 932450, ಕೈಗಾರಿಕಾತರಬೇತಿ ಸಂಸ್ಥೆಗಳಲ್ಲಿ 62437, ಪಾಲಿಟೆಕ್ನಿಕ್‌ನಲ್ಲಿ 48153, ಪದವಿಯಲ್ಲಿ 480000 ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದು, ಇದರಲ್ಲಿ ನಿರುದ್ಯೋಗದ ಶೇಕಡವಾರುದರ ಪಿರಿಯೋಡಿಕ್ ಲೇಬರ್ ಫೋರ್ಸ್ಸರ್ವೆ ಪ್ರಕಾರ 2.4 ಇರುತ್ತದೆ.
• ಈ ಕಾರ್ಯಕ್ರಮದ ಮೂಲ ಉದ್ದೇಶವೆನೆಂದರೆ ರಾಜ್ಯದಲ್ಲಿನ ನಿರುದ್ಯೋಗಿ ಯುವಜನತೆಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮುಖೇನ ಇಂದಿನ ಯುವಜನತೆಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದರೊಂದಿಗೆ ಈ ಮೂಲಕ ಕೌಶಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವುದಾಗಿದೆ.
• ನಮ್ಮ ಸರ್ಕಾರದ ಅವಧಿಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು 2016 ನೇ ಸಾಲಿನಲ್ಲಿ ಸೃಜಿಸಲಾಗಿದ್ದು, ಈ ಮೂಲಕ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯನ್ನು ನಮ್ಮ ಸರ್ಕಾರದಿಂದ ಜಾರಿಗೊಳಿಸಿ ಹಲವಾರು ಉಪ ಕ್ರಮಗಳ ಮೂಲಕ ರಾಜ್ಯದ ಯುವ ಜನತೆಗೆ ಉಚಿತ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯಮಶೀಲತೆಯ ನೆರವು ಹಾಗೂ ಜೀವನೋಪಾಯಕ್ಕೆ ಅಡಿಪಾಯವನ್ನು ರೂಪಿಸಿ ಮೌಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸಿದೆ.
• ಭಾರತದ ಕೆÀಲವು ರಾಜ್ಯಗಳನ್ನು ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಕ್ಕೆ ಸಂಬAಧಿಸಿದAತೆ ಪ್ರತ್ಯೇಕವಾದ ಇಲಾಖೆಯು ಸೃಜನೆಯಾಗಿರುವುದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಈ ಕಾರ್ಯವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿ ಜಾರಿಗೊಳಿಸಿದೆ. ಈ ಮೂಲಕ ಮಾನವ ಸಂಪನ್ಮೂಲವನ್ನು ಒದಗಿಸುವುದರೊಂದಿಗೆ ಬೇಡಿಕೆ ಆಧಾರಿತ ಮಾನವ ಸಂಪನ್ಮೂಲನವನ್ನು ಒದಗಿಸುವ ಕಾರ್ಯವನ್ನು ಇಲಾಖೆಯು ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಗುರಿಯೊಂದಿಗೆ ದೇಶದಲ್ಲಿಯೇ ಪ್ರಥಮ ಪ್ರಯತ್ನದ ರೂಪದಲ್ಲಿ ಜಾರಿಗೊಳಿಸಿದೆ.
• ಈ ಉದ್ಯೋಗ ಮೇಳದಲ್ಲಿ 1,10,000 ಕ್ಕೂ ಅಧಿಕ ಉದ್ಯೋಗವಕಾಶಗಳು ಇದ್ದು, 600 ಕ್ಕೂ ಅಧಿಕ ಪ್ರತಿಷ್ಟಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಭಾಗವಹಿಸಿದ ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗಾವಕಾಶ ಒದಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ.
• ಯುವ ಸಮೃದ್ಧಿ ಸಮ್ಮೇಳನದ ಮೂಲಕ ಎಲ್ಲಾ ಕನಿಷ್ಠ ಹಾಗೂ ಗರಿಷ್ಠ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳನ್ನು ಒಳಗೊಂಡAತೆ ಉದ್ಯೋಗಾವಕಾಶ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
• ಉದ್ಯೋಗ ಮೇಳದಲ್ಲಿ ನೇರವಾಗಿ ಉದ್ಯಮಿಗಳಿಂದಲೇ ನೇವiಕಾತಿ ಪ್ರಕ್ರಿಯನ್ನು ಪರದರ್ಶಕವಾಗಿ ಕೈಗೊಳ್ಳಲಾಗಿದೆ.
• ಮುಂಬರುವ ದಿನಗಳಲ್ಲಿ ಅಂದರೆ 05 ವರ್ಷಗಳ ಈ ಸರ್ಕಾರದ ಅವಧಿಯಲ್ಲಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಉದ್ಯಮಶೀಲತೆ ಮತ್ತು ಜೀವನೋಪಾಯವನ್ನು ಒದಗಿಸುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿರುತ್ತದೆ.
• ಪ್ರಸ್ತುತ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಪ್ರತಿ ವರ್ಷಕ್ಕೆ ಒಂದರAತೆ ಆಯಾ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದ್ದು, ಇದರೊಂದಿಗೆ ಜಿಲ್ಲಾ ಮಟ್ಟದಲ್ಲಿಯೂ ಪ್ರತ್ಯೇಕ ಉದ್ಯೋಗ ಮೇಳಗಳನ್ನು ಆಯೋಜಿಸಲು ತೀರ್ಮಾನಿಸಲಾಗಿರುತ್ತದೆ.
• ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯವತಿಯಿಂದ ಯುವನಿಧಿಗೆ ನೋಂದಣಿಯಾದ ಅಭ್ಯರ್ಥಿಗಳಲ್ಲಿ ಕನಿಷ್ಠ 25,000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಘೋಷಣೆಯನ್ನು ಮಾಡಲಾಗಿದೆ. ಅದರಂತೆ ಪ್ರತಿಷ್ಟಿತ ಕೈಗಾರಿಕಾ ಸಂಸ್ಥೆಗಳ ಮೂಲಕ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುವುದು.
• ನಮ್ಮ ಸರ್ಕಾರದ ಅವಧಿಯಲ್ಲಿ ಕಲಿಕೆ ಜೊತೆಗೆ ಕೌಶಲ್ಯ : ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಘೋಷಿಸಲಾಗಿದ್ದು, ಉನ್ನತ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಆಯ್ದ 62 ಕಾಲೇಜುಗಳಲ್ಲಿನ ಬಿ.ಎ/ ಬಿ.ಕಾಂ/ ಬಿ.ಬಿ.ಎ/ ಬಿ.ಎಸ್.ಸಿ/ ಪದವಿಯ 5 & 6 ನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ 28 ವಿವಿಧ ಕೈಗಾರಿಕಾ ಬೇಡಿಕೆ ಆಧಾರಿತ ಅಲ್ಪಾವಧಿ ತರಬೇತಿಯನ್ನು ಗುಣಮಟ್ಟದ ಆಧಾರಿತವಾಗಿ ನೀಡಲು ಹಾಗೂ ನೇರವಾಗಿ ಕೈಗಾರಿಕೆ/ ಉದ್ಯಮಗಳ ಪ್ರಮಾಣಪತ್ರವನ್ನು ನೀಡುವ ಮುಖೇನ ಉದ್ಯೋಗಾವಕಾಶವನ್ನು ಕಲ್ಪಿಸಲು 102 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 150 ಉನ್ನತೀಕರಿಸಿದ ಸರ್ಕಾರಿ ಐಟಿಐ, 32 ಜಿಟಿಟಿಸಿ ಮತ್ತು 8 ಕೆಜಿಟಿಟಿಐಗಳಲ್ಲಿನ ಮೂಲಕ ತರಬೇತಿಯನ್ನು ನೀಡಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಕ್ರಮವಹಿಸಲಾಗಿದೆ.
• ನಮ್ಮ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಕ್ಯಾರಿಯರ್ ಪ್ಲಾನಿಂಗ್ ಕಾರ್ಯಕ್ರಮದಡಿ “ನನ್ನ ವೃತ್ತಿ, ನನ್ನ ಆಯ್ಕೆ” ಎಂಬ ಧೇಯವಾಕ್ಯದೊಂದಿಗೆ 8 ನೇತರಗತಿಯಿಂದ 12 ನೇ ತರಗತಿಯವರೆಗಿನ¸ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಘೋಷಿಸಿದ್ದು, 150 ಎನ್.ಎಸ್.ಕ್ಯೂ.ಎಫ್ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
• ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಈಗಾಗಲೇ Iಟಿಜusಣಡಿಥಿ ಅoಟಿಟಿeಛಿಣ ಕಾರ್ಯಕ್ರಮದ ಮೂಲಕ Iಟಿಜusಣಡಿಥಿ ಐiಟಿಞಚಿge ಅeಟಟ ಸ್ಥಾಪಿಸಲಾಗಿದ್ದು, ಕೈಗಾರಿಕೆಗಳನ್ನು ತರಬೇತಿ ಪಾಲುದಾರರನ್ನಾಗಿ ಮಾಡಿ ಅವರದೇ ತರಬೇತಿ ಕೇಂದ್ರಗಳ ಮೂಲಕ ಔದ್ಯೋಗಿಕ ಬೇಡಿಕೆಗಳ ಅನುಸಾರವಾಗಿ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಒದಗಿಸುವ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ
• ಅಂತರಾಷ್ಟ್ರೀಯ ವಲಸೆ ಕೇಂದ್ರ (ಐ.ಎಂ.ಸಿ.ಕೆ) :
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಐ.ಎಂ.ಸಿ.ಕೆ ಘಟಕದ ವತಿಯಿಂದ ಪೂರ್ವ ನಿರ್ಗಮನ ತರಬೇತಿಯನ್ನು 850 ಅಭ್ಯರ್ಥಿಗಳಿಗೆ ಕೈಗೊಂಡು, ವಿದೇಶಿ ಉದ್ಯೋಗಾವಕಾಶವನ್ನು ರಾಜ್ಯದ ಯುವಜನತೆಗೆ ಕಲ್ಪಿಸುವ ಸಲುವಾಗಿ, ಹಂಗೇರಿದೇಶದೊAದಿಗೆ ಒಡಂಬಡಿಕೆ ಮಾಡಿಕೊಂಡು 41 ಚಾಲಕ ಹುದ್ದೆಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿರುತ್ತದೆ. 2021-22ನೇ ಸಾಲಿನಲ್ಲಿ 248, 2022-23ನೇ ಸಾಲಿನಲ್ಲಿ 396, ಹಾಗೂ 2023-24ನೇ ಸಾಲಿನಲ್ಲಿ 106 ಮಂದಿಗೆ ಕುವೈತ್ ನಲ್ಲಿ ಕೆಲಸ/ ಇmigಡಿಚಿಣioಟಿ ಅಟeಚಿಡಿಚಿಟಿಛಿe ಒದಗಿಸಲಾಗಿದೆ.
ಪ್ರಸ್ತುತ ಸ್ಲೋವೇಕಿಯಾ (ಯೂರೋಪ್) ದೇಶಕ್ಕೆ 2500 ಕ್ಕೂ ಮೇಲ್ಪಟ್ಟು ಅಸೆಂಬ್ಲಿ ಲೈನ್‌ಆಪರೇಟರ್ ವೃತ್ತಿಗಳಿಗೆ ಬೇಡಿಕೆಯು ಸ್ವೀಕೃತಗೊಂಡಿದ್ದು, 219 ಅಭ್ಯರ್ಥಿಗಳು ಪ್ರಥಮ ಹಂತದಲ್ಲಿ ಆಯ್ಕೆಗೊಂಡಿದ್ದು, ವೀಸಾ ಪ್ರಕ್ರಿಯೆಯು ನಡೆಯುತ್ತಿದೆ. ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದೆ. ಮುಂದುವರೆದು ಇತರೆ ದೇಶಗಳೊಂದಿಗೆ ವಿದೇಶಿ ಉದ್ಯೋಗಾವಕಾಶಕಲ್ಪಿಸುವ ಸಲುವಾಗಿ ಬೇಡಿಕೆಯನ್ನು ತರುವ ಪ್ರಕ್ರಿಯೆ ಚಾಲ್ತಿಯಲಿರುತ್ತದೆ.
• ಕರ್ನಾಟಕ ರಾಜ್ಯದಲ್ಲಿ ಇದೇ ಪ್ರಪ್ರಥಮ ಬಾರಿಗೆ hಣಣಠಿs://sಞiಟಟಛಿoಟಿಟಿeಛಿಣ.ಞಚಿushಚಿಟಞಚಿಡಿ.ಛಿom/ ಪೋರ್ಟಲ್ ಮುಖಾಂತರ ಉದ್ಯೋಗಾದಾತರು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೇ ಸೂರಿನಡಿ ತರುವ ಮೂಲಕ ಕೈಗಾರಿಕಾ ಆದ್ಯತೆ ಅನುಗುಣವಾಗಿ ಕೌಶಲ್ಯತರಬೇತಿ ನೀಡಿ ಮಾನವ ಸಂಪನ್ಮೂಲವನ್ನು ದೊರಕಿಸುವ ಕಾರ್ಯವನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯವತಿಯಿಂದ ಈಗಾಗಲೇ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ 75000 ಕ್ಕೂ ಹೆಚ್ಚು ಯುವಕರನ್ನು ಪೋರ್ಟಲ್‌ನಲ್ಲಿ ನೊಂದಾಯಿಸಲಾಗಿದ್ದು, 600 ಕ್ಕೂ ಹೆಚ್ಚು ಕಂಪನಿಗಳು ಮತ್ತು ಉದ್ಯೋಗದಾತರು ಇಲ್ಲಿಯವರೆಗೆ ಪೋರ್ಟಲ್‌ನಲ್ಲಿ ಸುಮಾರು 11,000 ಉದ್ಯೋಗಾವಕಾಶಗಳನ್ನು ಪ್ರಚುರ ಮಾಡಿದ್ದಾರೆ.
• ಇ-ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30 ಕ್ಕೂ ಹೆಚ್ಚು ಕೋರ್ಸ್ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್‌ಲೈನ್ ವೇದಿಕೆಯನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ನೀಡಿದೆ.