ಉಡುಪಿ : ಕಳೆದ ವರ್ಷ ಉಡುಪಿಯ ನೇಜಾರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಗೈದಿದ್ದ ಆರೋಪಿ ಪ್ರವೀಣ್ ಚೌಗಲೇ ಸಲ್ಲಿಸಿದ್ದ ಪೇರೋಲ್ ಅರ್ಜಿಯನ್ನ ಇದೀಗ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯ ವಜಾಗೊಳಿಸಿದೆ.
ಫೆಬ್ರವರಿ 1 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಿಧನರಾದ ತಮ್ಮ ಮೃತ ಸಹೋದರ ನಿತಿನ್ ಅವರ ಅಂತ್ಯಕ್ರಿಯೆಯ ವಿಧಿಗಳಲ್ಲಿ ಪಾಲ್ಗೊಳ್ಳಲು ತಾತ್ಕಾಲಿಕ ಬಿಡುಗಡೆಗಾಗಿ ಫೆಬ್ರವರಿ 8 ರಂದು ಮೂರು ಗಂಟೆಗಳ ಅವಧಿಗೆ ಚೌಗುಲೆ ಪೆರೋಲ್ ಅರ್ಜಿ ಸಲ್ಲಿಸಿದ್ದನು.ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಾಗ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎಚ್‌ಎಂ ನದಾಫ್ ಅವರು ಪೆರೋಲ್ ನೀಡುವ ಮನವಿಗೆ ಆಕ್ಷೇಪನೆ ವ್ಯಕ್ತಪಡಿಸಿದರು.
ವಾದಗಳನ್ನು ಕೂಲಂಕುಷವಾಗಿ ಪರಿಗಣಿಸಿದ ನ್ಯಾಯಾಧೀಶೆ ದೀಪಾ ಅವರು ಆರೋಪಿಗೆ ಪೆರೋಲ್ ನೀಡದೆ ಅರ್ಜಿಯನ್ನು ತಿರಸ್ಕರಿಸಿದರು. ವಾದ ಮಂಡನೆ ವೇಳೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ.ನದಾಫ್ ಇದ್ದರು.
ತನಿಖಾ ತಂಡವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ ಶೀಟ್ ಅನ್ನು ಫೆಬ್ರವರಿ 12 ರಂದು ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪೊಲೀಸರ ಕೈಸೇರಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳೊಂದಿಗೆ ತನಿಖೆ ಮುಕ್ತಾಯಗೊಂಡಿದೆ ಎಂದು ತಿಳಿದುಬಂದಿದೆ.