ಉಡುಪಿ : ಕೆಲವೊಂದು ವಿಚಿತ್ರವಾದ ಅಂತಹ ಘಟನೆಗಳನ್ನು ನಾವು ನೋಡಿರುತ್ತೇವೆ. ಕೇಳಿರುತ್ತೇವೆ. ಅದರಂತೆ ಇದೀಗ ಇಲ್ಲೊಂದು ಅಂಥದ್ದೇ ವಿಚಿತ್ರವಾದ ಘಟನೆ ನಡೆದಿದ್ದು, ತಮ್ಮ ಸ್ವಂತ ಬಸ್ ಅನ್ನು ತಾವೇ ಮಾರಾಟ ಮಾಡಿ, ಬಳಿಕ ಅಪ್ಪ ಮಗ ಇಬ್ಬರು ಸೇರಿ ಅದೇ ಬಸ್ ಅನ್ನು ಕದ್ದಿರುವಂತಹ ವಿಚಿತ್ರವಾದಂತಹ ಘಟನೆ ಉಡುಪಿಯಲ್ಲಿ ನಡೆದಿದೆ.ಸದ್ಯ ತಂದೆ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ
ಹೌದು ಅಪ್ಪ ಮಗ ತಮ್ಮ ಬಸ್ ಅನ್ನು ತುಮಕೂರಿನ ಉದ್ಯಮಿಯೊಬ್ಬರಿಗೆ ಸೇಲ್ ಮಾಡಿ ಮತ್ತೆ ಅದನ್ನು ಕದ್ದು ತಂದಿದ್ದರೆ. ತುಮಕೂರಿನ ಉದ್ಯಮಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸಿ ಇದೀಗ ಕಕ್ಕಾಬಿಕ್ಕಿಯಾಗಿದ್ದಾರೆ. ಈ ಕುರಿತು ಉಡುಪಿ ಜಿಲ್ಲೆಯ ಕಾಪುವಿನಲ್ಲಿ ತಂದೆ ಮಗನ ವಿರುದ್ಧ ಇದೀಗ ‘FIR’ ದಾಖಲಾಗಿದೆ. ತುಮಕೂರಿನ ಕೊರಟಗೆರಿಯ ಸೈಯದ್ ಎನ್ನುವವರು ಬಸ್ ಖರೀದಿಸಿದ್ದರು.
ಕಾಪುವಿನ ಸಮೀರ್ ಮಾಲೀಕತ್ವದ ಬಸ್ ಅನ್ನು ಖರೀಸಿದಿದ್ದರು. ಸೈಯದ್ ಮಗ ಸಿದ್ದಿಕ್ ಹಾಗೂ ಸ್ನೇಹಿತ ಜಾವೇದ ಜೊತೆ ಬಸ್ ಖರೀದಿಗೆ ಹೋಗಿದ್ದರು. 9,50,000 ನೀಡಿ ಬಸ್ ಖರೀದಿಸಿದ್ದರು. 2017 ಮಾಡೆಲ್ ಬಸ್ ಕರಿಸಿ ತುಮಕೂರಿಗೆ ತಂದಿದ್ದರು. ಬಸ್ ಮಾರಾಟವಾದ ಬಳಿಕ ಅಪ್ಪ ಮಗನೇ, ಮಾರಾಟ ಮಾಡಿದ ಬಸ್ಸನ್ನು ಮತ್ತೆ ಕದ್ದು ತಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಸಮೀರ್ ಹಾಗೂ ಮಗ ಅಬ್ದುಲ್ ಖಾದರ್ ವಿರುದ್ಧ ‘FIR’ ದಾಖಲಾಗಿದೆ.ಸದ್ಯ ತಂದೆ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ