Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆಗೆ ಶರಣು

06/03/2026 2:59 PM

BREAKING : 2025ರ ‘UPSC CSE’ ಫಲಿತಾಂಶ ಪ್ರಕಟ ; 958 ಅಭ್ಯರ್ಥಿಗಳು IAS, IFS, IPS ಹುದ್ದೆಗಳಿಗೆ ಅರ್ಹತೆ!

06/03/2026 2:59 PM

BREAKING : 2025ರ ‘UPSC ನಾಗರಿಕ ಸೇವೆ’ಗಳ ಫಲಿತಾಂಶ ಪ್ರಕಟ ; ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ!

06/03/2026 2:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದಯಗಿರಿ ಕಲ್ಲು ತೂರಾಟ ಕೇಸ್ : ಬಿಜೆಪಿಯವರಿಂದ ರಾಜಕೀಯ ಅಸ್ತ್ರವಾಗಿ ಉಪಯೋಗ : ಗೃಹ ಸಚಿವ ಪರಮೇಶ್ವರ ಹೇಳಿಕೆ
KARNATAKA

ಉದಯಗಿರಿ ಕಲ್ಲು ತೂರಾಟ ಕೇಸ್ : ಬಿಜೆಪಿಯವರಿಂದ ರಾಜಕೀಯ ಅಸ್ತ್ರವಾಗಿ ಉಪಯೋಗ : ಗೃಹ ಸಚಿವ ಪರಮೇಶ್ವರ ಹೇಳಿಕೆ

By kannadanewsnow0524/02/2025 1:24 PM

ತುಮಕೂರು : ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ನಗರದಲ್ಲಿ ತುಮಕೂರು ಜಿಲ್ಲಾ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ನಡೆಸಲು ಜಿಲ್ಲಾ ಪಂಚಾಯತ್‌ ಸಭಾಂಗಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಉದಯಗಿರಿ ಗಲಾಟೆಗೆ ಯಾರು ಕಾರಣಕರ್ತರಾಗಿದ್ದರು ಅವರನ್ನೆಲ್ಲ ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಬಿಜೆಪಿಯವರು ಘಟನೆಯನ್ನು ರಾಜಕೀಯ ಅಸ್ತ್ರವಾಗಿ ಉಪಯೋಗ ಮಾಡಿಕೊಂಡು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಬಿಜೆಪಿಯವರು ಮೈಸೂರಿನಲ್ಲಿ ಇಂದು ಪ್ರತಿಭಟನೆ ಮಾಡಲು ಅನುಮತಿ ಕೋರಿ ಪೊಲೀಸರಿಗೆ ಮನವಿ ಮಾಡಿದ್ದರು‌. ಪ್ರತಿಭಟನೆ‌ ನಡೆಸುವುದಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಈ ವಿಚಾರಚಾಗಿ ಅನುಮತಿ ಕೋರಿ ಹೈಕೋರ್ಟ್‌ಗೆ ಹೋಗಿದ್ದಾರೆ. ಕೋರ್ಟ್‌ನಲ್ಲಿ ಏನು ತೀರ್ಮಾನ ಬರುತ್ತದೆಯೇ ನೋಡಬೇಕು ಎಂದು ಹೇಳಿದರು‌.ಮೈಸೂರು ಗಲಾಟೆ ವಿಚಾರದಲ್ಲಿ ಹೆಚ್ಚು ರಾಜಕೀಯ ಮಾಡುವ ಬದಲು, ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಮಗೆ ಅವಕಾಶ‌ ಮಾಡಿದರೆ ಒಳ್ಳೆಯದು. ಅದನ್ನು ಬಿಟ್ಟು ರಾಜಕೀಯ ಮಾಡಿದರೆ ಸರಿ ಹೋಗುವುದಿಲ್ಲ ಎಂದು ಎಚ್ಚರಿಸಿದರು.

ಮಂಗಳೂರು ಜೈಲಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಡ್ರಗ್ಸ್ ಪೂರೈಕೆ ಮಾಡಿದವರು ಯಾರು? ಹೇಗೆ ಪೂರೈಕೆಯಾಗಿದೆ ಎಂಬುದನ್ನು ತನಿಖೆ‌ ನಡೆಸಲಿದ್ದಾರೆ. ಅಕ್ರಮ ಚಟುವಟಿಕೆಗಳು ಕಂಡುಬಂದಾಗಲೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಮಂಗಳೂರು ಹೊಸ ಜೈಲು‌ ಕಟ್ಟಡ ನಿರ್ಮಾಣ ನಡೆಯುತ್ತಿದೆ.‌ ಪೂರ್ಣಗೊಂಡ ಬಳಿಕ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.

ಪ್ರತಿ ಸಲ ಗಡಿಭಾಗದಲ್ಲಿ ಭಾಷಾ ಆಧಾರದ ಮೇಲೆ ಆಗುವ ಗಲಾಟೆ ವೇಳೆ ಬಹಳ ಎಚ್ಚರಿಕೆಯಿಂದ ಮಹಾರಾಷ್ಟ್ರದವರು ನಡೆದುಕೊಳ್ಳಬೇಕು. ಅದನ್ನು ಹೆಚ್ಚು ಬೆಳೆಯಲು ಬಿಡಬಾರದು. ನಮ್ಮಲ್ಲಿ ಅಂತಹ ಪ್ರಕರಣಗಳು ಆದಾಗ ಕ್ರಮ ತೆಗೆದುಕೊಳ್ಳಲಾಗುತ್ತದೆ.‌‌ ಮಹಾರಾಷ್ಟ್ರದವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಾಯಕರು ದೆಹಲಿ ಪ್ರವಾಸ ಕೈಗೊಳ್ಳುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅನೇಕ ಬಾರಿ ಕೆಲಸ‌ ಕಾರ್ಯಗಳ ನಿಮಿತ್ತ ದೆಹಲಿಗೆ ಹೋಗುತ್ತಾರೆ. ನಾನು ಒಂದು ವರ್ಷದ ನಂತರ ದೇಹಲಿಗೆ ಹೋಗಿದ್ದೆ. ನಾನು ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಹೋಗಿರುವುದಾಗಿ ತಿಳಿಸಿದ್ದೆ. ದೆಹಲಿಗೆ ಹೋದಾಗ ಪಕ್ಷದ‌ ಕಚೇರಿಗೆ ಭೇಟಿ ನೀಡುವುದು ಸಹಜವಾದ ಪ್ರಕ್ರಿಯೆ. ಇದನ್ನು ಬೇರೆ ರೀತಿಯಾಗಿ ಅರ್ಥೈಸಿಕೊಳ್ಳುವುದರಿಂದ ಪ್ರಯೋಜನವಿಲ್ಲ‌ ಎಂದು ಹೇಳಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು ಕೊರಟಗೆರೆಯಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡುವಾಗ ಅವರ ಅನಿಸಿಕೆ ಆಧಾರದ ಮೇಲೆ ಮಾತನಾಡಿದ್ದೇನೆ. ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯತೆ ಇಲ್ಲ. ಇದರಿಂದ ಯಾವ ಸಂಚಲನ ಮಾಡಬೇಕಾದ ಅಗತ್ಯವಿಲ್ಲ. ನನ್ನ ರಾಜಕೀಯದ ವಿಚಾರ ಕೊರಟಗೆರೆ ಜನತೆಗೆ ಬಿಟ್ಟಿರುವುದು. ಕೊರಟಗೆರೆ ಜನ ನನ್ನನ್ನು ಆರಿಸಿದ್ದಾರೆ. ಅವರ ಏನು ಆಪೇಕ್ಷೆ ಪಡುತ್ತಾರೆ, ಅದ‌ನ್ನು ಮಾತಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಸಿಎಂ ಆಗಲಿ ಎಂದು ಆಪೇಕ್ಷೆಪಡುತ್ತಾರೆಯೇ ಎಂದ ಮಾಧ್ಯಮದವರ ಪ್ರಶ್ನೆಗೆ, ನಾನು ಅದ್ಯಾವುದರ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಮುಖ್ಯಮಂತ್ರಿಗಳ ವಿಚಾರ, ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ಯಾವುದನ್ನು ಬಹಿರಂಗವಾಗಿ ಮಾತನಾಡುವುದಿಲ್ಲ. ನಮ್ಮ ಅನಿಸಿಕೆಗಳನ್ನು ಹೈಕಮಾಂಡ್ ಮುಂದೆ ಹೇಳುವಂತಹದು ನಮ್ಮ ಪಕ್ಷದಲ್ಲಿನ ಪ್ರಕ್ರಿಯೆ.‌ ಇದನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಮಾಡುತ್ತಾರೆ. ನಾನು ಸೇರಿದಂತೆ‌ ಎಲ್ಲರು ಮಾಡುತ್ತೇವೆ‌ ಎಂದು ಹೇಳಿದರು‌.

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆಗೆ ಶರಣು

06/03/2026 2:59 PM1 Min Read

ಸಾಗರದ ಮಾರಿಗುಡಿ ಸಮಿತಿಗೆ ಚುನಾವಣೆ: ಹಿತರಕ್ಷಣಾ ವೇದಿಕೆ ತಂಡಕ್ಕೆ ಬಹುಮತ ನಿರೀಕ್ಷೆ – ಸಂಚಾಲಕ ಎಂ.ಡಿ ಆನಂದ್

06/03/2026 2:50 PM2 Mins Read

ಚರಕ ನೈಸರ್ಗಿಕ ಉತ್ಪನ್ನಗಳ ಮೇಳ ಉದ್ಘಾಟಿಸಿದ ವಿದುಷಿ ವಸುಧಾ ಶರ್ಮ: ನೈಸರ್ಗಿಕ ಉತ್ಪನ್ನಗಳ ಬಳಕೆಗೆ ಕರೆ

06/03/2026 2:40 PM1 Min Read
Recent News

ಸಾಗರದಲ್ಲಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆಗೆ ಶರಣು

06/03/2026 2:59 PM

BREAKING : 2025ರ ‘UPSC CSE’ ಫಲಿತಾಂಶ ಪ್ರಕಟ ; 958 ಅಭ್ಯರ್ಥಿಗಳು IAS, IFS, IPS ಹುದ್ದೆಗಳಿಗೆ ಅರ್ಹತೆ!

06/03/2026 2:59 PM

BREAKING : 2025ರ ‘UPSC ನಾಗರಿಕ ಸೇವೆ’ಗಳ ಫಲಿತಾಂಶ ಪ್ರಕಟ ; ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ!

06/03/2026 2:52 PM

ಸಾಗರದ ಮಾರಿಗುಡಿ ಸಮಿತಿಗೆ ಚುನಾವಣೆ: ಹಿತರಕ್ಷಣಾ ವೇದಿಕೆ ತಂಡಕ್ಕೆ ಬಹುಮತ ನಿರೀಕ್ಷೆ – ಸಂಚಾಲಕ ಎಂ.ಡಿ ಆನಂದ್

06/03/2026 2:50 PM
State News
KARNATAKA

ಸಾಗರದಲ್ಲಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆಗೆ ಶರಣು

By kannadanewsnow0906/03/2026 2:59 PM KARNATAKA 1 Min Read

ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಲ್ಲದ ಕೃಷ್ಣಪ್ಪ ಅವರ ಮಗ ನಾಗರಾಜ್ ಎಂಬುವರ…

ಸಾಗರದ ಮಾರಿಗುಡಿ ಸಮಿತಿಗೆ ಚುನಾವಣೆ: ಹಿತರಕ್ಷಣಾ ವೇದಿಕೆ ತಂಡಕ್ಕೆ ಬಹುಮತ ನಿರೀಕ್ಷೆ – ಸಂಚಾಲಕ ಎಂ.ಡಿ ಆನಂದ್

06/03/2026 2:50 PM

ಚರಕ ನೈಸರ್ಗಿಕ ಉತ್ಪನ್ನಗಳ ಮೇಳ ಉದ್ಘಾಟಿಸಿದ ವಿದುಷಿ ವಸುಧಾ ಶರ್ಮ: ನೈಸರ್ಗಿಕ ಉತ್ಪನ್ನಗಳ ಬಳಕೆಗೆ ಕರೆ

06/03/2026 2:40 PM

ಇಂದಿನ ‘ಸಿದ್ದರಾಮಯ್ಯ ಬಜೆಟ್​’ನಲ್ಲಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?: ಇಲ್ಲಿದೆ ಸಂಪೂರ್ಣ ಮಾಹಿತಿ

06/03/2026 2:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.