ಜಮ್ಮು- ಕಾಶ್ಮೀರ : ಕಾಶ್ಮೀರದ ಮಚಿಲ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚಿಲ್ನ ಟೆಕ್ರಿ ನಾರ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಇಂದು ಎನ್ಕೌಂಟರ್ ನಡೆದಿದೆ.
BIGG UPDATE : ಮಾಜಿ ಸಿಎಂ ‘S.M ಕೃಷ್ಣ’ ಆರೋಗ್ಯದ ಕುರಿತು ವೈದ್ಯರು ಹೇಳಿದ್ದೇನು..? ಇಲ್ಲಿದೆ ಸ್ಪಷ್ಟನೆ
ಅವರಿಂದ ಎರಡು ಎಕೆ-47 ರೈಫಲ್ಗಳು, ಎರಡು ಪಿಸ್ತೂಲ್ಗಳು ಮತ್ತು ನಾಲ್ಕು ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಭಯೋತ್ಪಾದಕರು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Army and Kupwara Police neutralised two #terrorists near #LoC Tekri Nar in Machil area of #Kupwara. Identification of the killed terrorists being ascertained. 02 AK 47 rifles, 02 pistols & 04 hand grenades recovered. Further details shall follow.@JmuKmrPolice
— Kashmir Zone Police (@KashmirPolice) September 25, 2022
ಈ ಕುರಿತಂತೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದ, ಕುಪ್ವಾರದ ಮಚಿಲ್ ಪ್ರದೇಶದ ಎಲ್ಒಸಿ ಟೆಕ್ರಿ ನಾರ್ ಬಳಿ ಸೇನೆ ಮತ್ತು ಕುಪ್ವಾರ ಪೊಲೀಸರು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿದ್ದಾರೆ. ಹತರಾದ ಉಗ್ರರಿಂದ 02 ಎಕೆ 47 ರೈಫಲ್ಗಳು, 02 ಪಿಸ್ತೂಲ್ಗಳು ಮತ್ತು 04 ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸುಮಾರು 10 ದಿನಗಳ ಹಿಂದೆ ಶ್ರೀನಗರ ಜಿಲ್ಲೆಯ ನೌಗಾಮ್ ಪ್ರದೇಶದಲ್ಲಿ ಎನ್ಕೌಂಟರ್ ನಡೆಸಲಾಗಿತ್ತು. ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ.