ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಸುಧಾಕರ್ ತವರು ಕ್ಷೇತ್ರದಲ್ಲೇ ದುರಂತ ನಡೆದಿದೆ. ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರ್ಕಾರಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯವರ ನಿರ್ಲಕ್ಷ್ಯ ಬಾಣಂತಿಯೊಬ್ಬರು ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
BIGG NEWS : ವಿಧಾನಸೌಧದ ಮುಂದೆ 25 ಲಕ್ಷ ಪಂಚಮಸಾಲಿ ಲಿಂಗಾಯತರಿಂದ ಧರಣಿ : ಬಸವ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಚಿಂತಾಮಣಿ ತಾಲೂಕಿನ ನೀಲಪಲ್ಲಿ ಗ್ರಾಮದ ಗೋಪಾಲಗೌಡ, ಪತ್ನಿ ನೇತ್ರಾವತಿಯ ಹೆರಿಗೆಗೆ ಕಳೆದ ತಿಂಗಳು 9ರಂದು ಚಿಂತಾಮಣಿ ಸರ್ಕಾರಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಗೆ
ದಾಖಲಾಗಿದ್ದರು. ಬಳಿಕ ಅವರಿಗೆ ಸಿಸೇರಿಯನ್ ಮಾಡಲಾಗಿತ್ತು. ತಾಯಿ ಮತ್ತು ಮಗು ಆರೋಗ್ಯವಾಗಿಯೇ ಇದ್ದರು.ಇದ್ದಕ್ಕಿದ್ದಂತೆ ತಾಯಿಗೆ ಜಾಂಡೀಸ್ ಕಾಣಿಸಿಕೊಂಡ ಕಾರಣದಿಂದ ಸಿಸೇರಿಯನ್ ಮಾಡಿದ ಜಾಗದಲ್ಲಿ ಹೊಲಿಗೆ ಹಾಕಲು ಆಸ್ಪತ್ರೆಯವರು ನಿರ್ಲಕ್ಷ್ಯ ತೋರಿದ್ದಾರೆ. ತದನಂತರ ಸಿಸೇರಿಯನ್ ಮಾಡಿದ ಜಾಗದಲ್ಲಿ ಸಫ್ಟಿಕ್ ಆಗಿ ಗಾಯದಲ್ಲಿ ನೀರು ತುಂಬಿಕೊಂಡು ಕಿಡ್ನಿ ಮತ್ತು ನರಗಳ ದೌರ್ಬಲ್ಯದಿಂದ ತಾಯಿ ಮೃತಪಟ್ಟಿದ್ದಾರೆ.