ಸಿಡ್ನಿ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಹುಡುಕಾಟಕ್ಕೆ ಪೊಲೀಸರು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 6 ಜನರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಪತ್ತೆಗಾಗಿ ಸೋಮವಾರ ಪೊಲೀಸ್ ಅಧಿಕಾರಿಗಳು ಕ್ವೀನ್ಸ್ಲ್ಯಾಂಡ್ ರಾಜಧಾನಿ ಬ್ರಿಸ್ಬೇನ್ನ ವಾಯುವ್ಯಕ್ಕೆ 300 ಕಿಮೀ ದೂರದಲ್ಲಿರುವ ಸಣ್ಣ ಪಟ್ಟಣವಾದ ವೈಯಾಂಬಿಲ್ಲಾದಲ್ಲಿನ ನಿವಾಸದ ಬಳಿ ಹೋಗಿದ್ದಾರೆ. ಈ ವೇಳೆ ಶಸ್ತ್ರಸಜ್ಜಿತ ಇಬ್ಬರು ವ್ಯಕ್ತಿಗಳು ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಎಂದು ಕ್ವೀನ್ಸ್ಲ್ಯಾಂಡ್ ಪೊಲೀಸ್ ಯೂನಿಯನ್ ಅಧ್ಯಕ್ಷ ಇಯಾನ್ ಲೀವರ್ಸ್ ಹೇಳಿದರು.
ಇನ್ನೂ, ಘಟನಾ ಸ್ಥಳದಲ್ಲಿದ್ದ ಮತ್ತಿಗೆ ರೀತಿಯ ಪರಿಸ್ಥಿತಿಗೆ ತಜ್ಞ ಅಧಿಕಾರಿಗಳು ಮತ್ತು ವಾಯು ಬೆಂಬಲ ಪಡೆ ಸ್ಪಂದಿಸಿದ ನಂತರ ಸ್ಥಳೀಯ ಕಾಲಮಾನ ರಾತ್ರಿ 10:30 ರ ಹೊತ್ತಿಗೆ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS: ಡಿ. 24ರಿಂದ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ: ‘ಕಾಶಿ ವಿಶ್ವನಾಥ ದೇವಸ್ಥಾನ ಮಾದರಿ’ ಅನಾವರಣ
BIGG NEWS: ಡಿ. 24ರಿಂದ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ: ‘ಕಾಶಿ ವಿಶ್ವನಾಥ ದೇವಸ್ಥಾನ ಮಾದರಿ’ ಅನಾವರಣ