ಚಿತ್ರದುರ್ಗ : ಚಿತ್ರದುರ್ಗ ಹಾಗೂ ಮಡಿಕೇರಿಯಲ್ಲಿ ನಡೆದಂತಹ ಎರಡು ಪ್ರತ್ಯೇಕ ಘಟನೆಗಳಲ್ಲಿ ಈಜಲು ತೆರಳಿದ್ದ ಇಬ್ಬರು ವ್ಯಕ್ತಿಗಳು ನೀರು ಪಾಲಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಹೌದು ಈಜಲು ತೆರಳಿದ್ದ ಯುವಕನೋರ್ವ ಚಳ್ಳಕೆರೆ ತಾಲೂಕಿನ ಗೊರ್ಲತ್ತು ಗ್ರಾಮದ ಬಳಿಯಿರುವ ಚೆಕ್‌ಡ್ಯಾಂನಲ್ಲಿ ನೀರುಪಾಲಾಗಿದ್ದರೆ, ಇತ್ತ ಕುಶಾಲನಗರ ತಾಲೂಕಿನ ಹೆರೂರು ಬಳಿ ಇರುವ ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದಾಗ ಕಾಲಿಗೆ ಮೀನಿನ ಬಲೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಪೋಷಕರೇ ಗಮನಿಸಿ : ನಿಮ್ಮ ಮಗುವಿನ ಫೋನ್’ನಲ್ಲಿ ಈ ‘ಅಪ್ಲಿಕೇಶನ್’ಗಳಿವ್ಯಾ.? ಖಚಿತ ಪಡಿಸಿಕೊಳ್ಳಿ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೊರ್ಲತ್ತು ಗ್ರಾಮದ ಬಳಿಯಿರುವ ಚೆಕ್‌ಡ್ಯಾಂನಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರುಪಾಲಾಗಿದ್ದಾನೆ. ಹುಲಿಕುಂಟೆ ಗ್ರಾಮದ ಪ್ರಹ್ಲಾದ್(28) ಮೃತವ್ಯಕ್ತಿ. ಇದೀಗ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಸೇರಿ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು : ತಾಂತ್ರಿಕ ದೋಷದಿಂದ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು : ಪ್ರಾಣಾಪಾಯದಿಂದ ಪಾರಾದ ಯುವಕರು
ಮೀನಿನ ಬಲೆ ಸಿಲುಕಿ ವ್ಯಕ್ತಿ ಸಾವು
ಇತ್ತ ಮಡಿಕೇರಿ ಜಿಲ್ಲೆಯ ಕುಶಾಲನಗರ ತಾಲೂಕಿನ ಹೆರೂರು ಬಳಿ ಇರುವ ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದಾಗ ಕಾಲಿಗೆ ಮೀನಿನ ಬಲೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಬಾಲು(40) ಮೃತ ವ್ಯಕ್ತಿ. ಬಿಸಿಲ ಬೇಗೆಯ ಹಿನ್ನಲೆ ಈಜಲು ತೆರಳಿದಾಗ ಈ ದುರ್ಘಟನೆ ನಡೆದಿದೆ. ಇದೀಗ ಸ್ಥಳೀಯರು ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಶುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.