ಇಸ್ಲಮಾಬಾದ್: ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಂತ ಮತ್ತಿಬ್ಬರು ಪಾಕಿಸ್ತಾನದ ಸೈನಿಕರು ಸಾವನ್ನಪ್ಪಿದ್ದಾರೆ ಎಂಬುದಾಗಿ ಪಾಕ್ ದೃಢಪಡಿಸಿದೆ. ಹೀಗಾಗಿ ಭಾರತದ ದಾಳಿಯಲ್ಲಿ ಸಾವನ್ನಪ್ಪಿದ ಪಾಕಿಸ್ತಾನದ ಸೈನಿಕರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಮೇ 6-7 ರಂದು ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುದಾಳಿ (ಆಪರೇಷನ್ ಸಿಂಧೂರ್)ದಲ್ಲಿ ತನ್ನ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಬುಧವಾರ (ಮೇ 14) ದೃಢಪಡಿಸಿದೆ.
ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ದೃಢಪಡಿಸಿದ ನಂತರ, ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಸಾವನ್ನಪ್ಪಿದ ಪಾಕಿಸ್ತಾನಿ ಸೈನಿಕರ ಸಂಖ್ಯೆ 13 ಕ್ಕೆ ತಲುಪಿದ್ದು, ಗಾಯಗೊಂಡವರ ಸಂಖ್ಯೆ 78 ಆಗಿದೆ.
GOOD NEWS: ರಾಜ್ಯದಲ್ಲಿ ‘NHM ಯೋಜನೆ’ಯಡಿ ನೇಮಕಗೊಳ್ಳುವ ವೈದ್ಯರು, ಸ್ಟಾಫ್ ನರ್ಸ್ ಗಳಿಗೆ ಭರ್ಜರಿ ಸಿಹಿಸುದ್ದಿ