ಉತ್ತರಾಖಂಡ: ಉತ್ತರಾಖಂಡದಲ್ಲಿ ನಿನ್ನೆ ಸಂಜೆ ಟ್ರಕ್-ಶಾಲಾ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ವಿದ್ಯಾರ್ಥಿನಿ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಮೂವರು ಸಾವನ್ನಪ್ಪಿದರೆ, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ನಾನಕಮಟ್ಟಾ ಸಾಹಿಬ್ನಲ್ಲಿ ಪಿಕ್ನಿಕ್ನಿಂದ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ನಿನ್ನೆ ಸಂಜೆ ರಾಷ್ಟ್ರೀಯ ಹೆದ್ದಾರಿ-74 ರ ಸಿಸೈಯಾನ್ ಬಳಿ ಟ್ರಕ್ಗೆ ಗುದ್ದಿದೆ. ಅಪಘಾತದಲ್ಲಿ 14 ವರ್ಷದ ವಿದ್ಯಾರ್ಥಿ ಮತ್ತು 35 ವರ್ಷದ ಶಿಕ್ಷಕ ಸಾವನ್ನಪ್ಪಿದ್ದಾರೆ ಮತ್ತು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ 22 ಮಂದಿ ಗಂಭೀರವಾಗಿದ್ದು, ಅವರನ್ನು ಉನ್ನತ ಕೇಂದ್ರಗಳಿಗೆ ಸ್ಥಳಂತರಿಸಲಾಗಿದೆ. ಅಪಘಾತದ ಸಮಯದಲ್ಲಿ ಒಟ್ಟು 51 ಜನರು ಬಸ್ನಲ್ಲಿದ್ದರು ಎಂದು ಸಿತಾರ್ಗಂಜ್ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ತುಷಾರ್ ಸೈನಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೂ ಆದೇಶಿಸಿದ್ದಾರೆ.
ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
BIGG NEWS : ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ರಾಜ್ಯದಲ್ಲಿ ಮತ್ತೆ ಹೋಟೆಲ್ ತಿಂಡಿ, ಊಟ ದರ ಏರಿಕೆ
BREAKING NEWS : ತುಮಕೂರಿನ ಸಿದ್ದಗಂಗಾಮಠದಿಂದ ವಿದ್ಯಾರ್ಥಿ ನಾಪತ್ತೆ!
BIG NEWS: ʻಬಲವಂತದ ಧಾರ್ಮಿಕ ಮತಾಂತರ ಅತ್ಯಂತ ಗಂಭೀರ ವಿಷಯʼ: ಸುಪ್ರೀಂ ಕೋರ್ಟ್
BIGG NEWS : ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ರಾಜ್ಯದಲ್ಲಿ ಮತ್ತೆ ಹೋಟೆಲ್ ತಿಂಡಿ, ಊಟ ದರ ಏರಿಕೆ