ಹಾಸನ: ಜಿಲ್ಲೆಯ ಬೇಲೂರಲ್ಲಿ ಹಳೆಯ ಕಟ್ಟಡದ ಸಜ್ಜಾ ಕುಸಿದು ಘೋರ ದುರಂತವೊಂದು ಸಂಭವಿಸಿದೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಂತ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಾಸನದ ಬೇಲೂರಿನ ಚನ್ನಕೇಶವ ದೇವಾಲಯ ರಸ್ತೆಯ ಸಮೀಪದ ಖಾಸಗಿ ಕಟ್ಟಡ ಸಜ್ಜಾವೊಂದು ದಿಢೀರ್ ಕುಸಿತಗೊಂಡಿದೆ. ಈ ಘಟನೆಯಲ್ಲಿ ನಜೀರ್ ಹಗೂ ಅಮರನಾಥ್ ಎಂಬುವರು ಸಾವನ್ನಪ್ಪಿದ್ದಾರೆ.
ಇನ್ನೂ ಈ ದುರಂತದಲ್ಲಿ ನೀಲಮ್ಮ, ಜ್ಯೋತಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿಲ್ಪಾ ಎಂಬುವರಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದಾಗಿ ಹಾಸನ ಎಸ್ಪಿ ಮೊಹಮ್ಮದ್ ಸುಜೇತಾ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತರು ಹಾಗೂ ಗಾಯಗೊಂಡವರು ಬೀದಿ ಬರಿಯ ವ್ಯಾಪಾರಿಗಳು ಹಾಗೂ ಖರೀದಿದಾರರು ಎಂಬುದಾಗಿ ತಿಳಿದು ಬಂದಿದೆ. ಹಳೆಯ ಕಟ್ಟಡ ಕೆಳಗೆ ವ್ಯಾಪಾರ ಮಾಡುತ್ತಿದ್ದದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಸಿದ್ಧರಾಮಯ್ಯಗೆ ಈ ಸವಾಲ್ ಹಾಕಿದ ವಿಪಕ್ಷ ನಾಯಕ ಆರ್.ಅಶೋಕ್: ಜವಾಬ್ ಕೊಡ್ತಾರಾ ಸಿಎಂ?
BIG NEWS : ದೇಶಾದ್ಯಂತ `ತಾಪಮಾನ’ ಹೆಚ್ಚಳ : ಹೃದಯ, ಶ್ವಾಸಕೋಶ, ಮೆದುಳಿಗೆ ಹಾನಿಕಾರಕ.!