ಅಮೇರಿಕ : ಅಮೇರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 6 ಜನರು ಗಾಯಗೊಂಡಿದ್ದಾರೆ ಎಂದುನ್ ತಿಳಿದುಬಂದಿದೆ. ಗುಂಡಿನ ದಾಳಿ ನಡೆಸಿರುವ 20 ವರ್ಷದ ವಿದ್ಯಾರ್ಥಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ ಮಾಡಿದ ಯುವಕಾನನನ್ನು ಸ್ಥಳೀಯ ಶೆರಿಫ್ ಡೆಪ್ಯೂಟಿಯ ಮಗ ಎಂದು ತಿಳಿದುಬಂದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಒಂದು ಘಟನೆ ಅಮೆರಿಕದ ಕಾಲೇಜು ಕ್ಯಾಂಪಸ್ ಅನ್ನು ಬೆಚ್ಚಿಬೀಳಿಸಿದೆ.
ಯುವಕನನ್ನು 20 ವರ್ಷದ ಫೀನಿಕ್ಸ್ ಇಕ್ನರ್ ಎಂದು ಗುರುತಿಸಲಾಗಿದ್ದು, ಆಪಾದಿತ ಬಂದೂಕುಧಾರಿ ವಿದ್ಯಾರ್ಥಿ ಬೆಳಿಗ್ಗೆ 11:50 ರ ಸುಮಾರಿಗೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು ಗುಡ್ನದ ಅಳಿಯಲಿ ಆರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು. ಮಾಹಿತಿ ನೀಡಿದ್ದಾರೆ. ತಕ್ಷಣ ಗುಂಡಿನ ದಾಳಿ ನಡೆಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.