ಶಿವಮೊಗ್ಗ: ಜಿಲ್ಲೆಯ ಶಿರಾಳಕೊಪ್ಪ ಬಸ್ ನಿಲ್ದಾಣದ ಸಮೀಪದಲ್ಲಿ ನಿಗೂಢ ವಸ್ತು ಸ್ಪೋಟಗೊಂಡ ಪರಿಣಾಮ, ಇಬ್ಬರು ಗಾಯಗೊಂಡಿರೋ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿರೋದಾಗಿ ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಸ್ ನಿಲ್ದಾಣದ ಸಮೀಪ ಬ್ಯಾಗ್ ನಲ್ಲಿ ಇಟ್ಟಿದ್ದಂತ ವಸ್ತು ಸ್ಪೋಟಗೊಂಡಿದೆ. ಉಮೇಶ್ ಎಂಬಾತ ಇಟ್ಟುಹೋಗಿದ್ದಂತ ಬ್ಯಾಗ್ ನಲ್ಲಿದ್ದ ವಸ್ತುವೊಂದು ಸ್ಪೋಟಗೊಂಡ ಪರಿಣಾಮ ಬೆಡ್ ಶೀಟ್ ಮಾರಲು ಬಂದಿದ್ದಂತ ಆಂಥೋನಿ ಸೇರಿದಂತೆ, ಇಬ್ಬರು ಗಾಯಗೊಂಡಿರೋದ್ದಾರೆ.
ಗಾಯಾಳುಗಳನ್ನು ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದಂತ ಶಿರಾಳಕೊಪ್ಪ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಈ ಆರ್ಥಿಕ ವರ್ಷದಲ್ಲಿ ಭಾರತದ ‘ವಿದ್ಯುತ್ ಬಳಕೆಯು’ ಶೇ.7.5 ರಷ್ಟು ಬೆಳವಣಿಗೆ
BREAKING: ‘ರಂಭಾಪುರಿ ಶ್ರೀ’ಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣ: ’59 ಮಂದಿ’ ವಿರುದ್ಧ FIR ದಾಖಲು