ಬೆಂಗಳೂರು: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಲ್ಲಿ ಆನೇಕಲ್ ತಾಲ್ಲೂಕಿನ ಕಿತ್ತಗಾನಹಳ್ಳಿಯಲ್ಲಿ ಜ್ಯೋತಿ ಗ್ಯಾಸ್ ನಿಂದ ಎರಡು ದಿನಗಳ ಹಿಂದೆ ಸಿಲಿಂಡರ್ ಖರೀದಿಸಿ ತಂದಿದ್ದರು. ಈ ಗ್ಯಾಸ್ ಸಿಲಿಂಡರ್ ನಿಂದ ಅರ್ಧದಷ್ಟು ಗ್ಯಾಸ್ ಸೋರಿಕೆ ಆಗಿತ್ತು.
ಗ್ಯಾಸ್ ಸೋರಿಕೆಯ ಬಗ್ಗೆ ತಿಳಿಯದಂತ ವ್ಯಕ್ತಿಯಗಳು ಬೆಂಕಿ ಹೊತ್ತಿಸಿದಾಗ ದಿಢೀರ್ ಸ್ಪೋಟಗೊಂಡಿದೆ. ಈ ಸ್ಪೋಟದಿಂದಾಗಿ ಇಡೀ ಮನೆಯೇ ಛಿದ್ರ ಛಿದ್ರವಾಗಿದೆ. ಅಲ್ಲದೇ ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ಈ ಘಟನೆ ಸಂಬಂಧ ಕಟ್ಟಡದ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಗ್ಯಾಸ್ ಸೋರಿಕೆಯಾಗಿ ಸ್ಪೋಟಗೊಂಡ ಬಗ್ಗೆ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
SHOCKING: ಶಾಲೆಯಲ್ಲಿ ನೋಟ್ಸ್ ತೋರಿಸುತ್ತಿದ್ದಾಗಲೇ ಹೃದಯಾಘಾತ: ಕುಸಿದು ಬಿದ್ದು 3ನೇ ತರಗತಿ ವಿದ್ಯಾರ್ಥಿನಿ ಸಾವು
BIG UPDATE : ಕರ್ನಾಟಕದಲ್ಲಿ 2 ‘HMPV’ ಸೋಂಕು ಧೃಡ : ‘ICMR’ ಸ್ಪಷ್ಟನೆ | HMPV VIRUS