ವಿಜಯಪುರ : ಸಾಲಭಾದೆ ತಾಳದೆ ರಾಜ್ಯದಲ್ಲಿ ಇಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಇಂಡಿ
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾದ ಗ್ರಾಮದ ರೈತ ರೇವಣಸಿದ್ದ ಸಂಗಪ್ಪ ಚಿವಟೆ (35) ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಗ್ರಾಮದಲ್ಲಿ ಸ್ಥಳೀಯರಿಂದ ಹಾಗೂ ಸಹಕಾರಿ ಸಂಘದಲ್ಲಿ ಸಂಗಪ್ಪ ಬೆಳೆ ಸಾಲ ಪಡೆದಿದ್ದರು ಎನ್ನಲಾಗಿದೆ. ಘಟನೆ ಕುರಿತಂತೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲಗೂರು
ಇನ್ನು ಮಂಡ್ಯ ಜಿಲ್ಲೆಯಲ್ಲಿ ಇನ್ನೊಂದು ಪ್ರಕರಣ ನಡೆದಿದ್ದು, ಹಲಗೂರು ಸಮೀಪದ ನಂದೀಪರ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ವಿಷ ಕುಡಿದ ರೈತ ಸಿದ್ದೇಗೌಡ (55) ಮೃತಪಟ್ಟ ರೈತ ಎಂದು ತಿಳಿದುಬಂದಿದೆ.
ಕೊಳವೆಬಾವಿ ಕೊರೆಸಲು ಸ್ಥಳೀಯರಿಂದ ₹3 ಲಕ್ಷ ಕೈಸಾಲ ಮತ್ತು ದಳವಾಯಿ ಕೋಡಿಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75 ಸಾವಿರ ಬೆಳೆ ಸಾಲ ಪಡೆದಿದ್ದರು. ಬಹಳ ದಿನಗಳಿಂದ ಸಾಲ ತೀರಿಸಲಾಗದೇ ಬೇಸರದಿಂದ ಕಳೆದ ಸೆ.26 ರಂದು ತಡರಾತ್ರಿ ವಿಷ ಸೇವಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.