ಚೀನಾದ ಇನ್ನರ್ ಮಂಗೋಲಿಯಾ ಪ್ರದೇಶದಲ್ಲಿ ಕಾರ್ಖಾನೆ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 84 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಕ್ಕು ಕಾರ್ಖಾನೆಯ ಉಸ್ತುವಾರಿ ವಹಿಸಿಕೊಂಡಿದ್ದವರನ್ನು ಚೀನಾದ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ
ಇತರ ಎಂಟು ಜನರು ಪತ್ತೆಯಾಗಿಲ್ಲ.ಫ್ಯಾಕ್ಟರಿಯಲ್ಲಿ ಪ್ರೆಷರೈಸ್ಡ್ ಸ್ಟೋರೇಜ್ ಟ್ಯಾಂಕ್ ಸ್ಫೋಟಗೊಂಡಿದೆ
ಉಗಿ ಮತ್ತು ಹೆಚ್ಚಿನ ತಾಪಮಾನದ ನೀರನ್ನು ಹಿಡಿದಿಟ್ಟುಕೊಳ್ಳಲು ವಿನ್ಯಾಸಗೊಳಿಸಲಾದ ಒತ್ತಡದ ಶೇಖರಣಾ ಟ್ಯಾಂಕ್ ಕಾರ್ಖಾನೆಯಲ್ಲಿ ಸ್ಫೋಟಗೊಂಡಿದೆ ಎಂದು ಬಾವೊಟೌ ನಗರದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾವೊಟೌ ನಗರದ ಬಾವೊಗಾಂಗ್ ಯುನೈಟೆಡ್ ಸ್ಟೀಲ್ ಸ್ಥಾವರದಲ್ಲಿ ಈ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನಕ್ಕೆ ಕಾರಣವಾಗಿದೆ.
ಇನ್ನೂ 8 ಮಂದಿ ನಾಪತ್ತೆಯಾಗಿದ್ದಾರೆ
ಕಾಣೆಯಾದ ಎಂಟು ಜನರಿಗಾಗಿ ರಕ್ಷಣಾ ತಂಡವು ಹುಡುಕಾಟ ನಡೆಸುತ್ತಿದೆ ಎಂದು ಬಾವೊಟೌ ನಗರದ ಮಾಹಿತಿ ಕಚೇರಿಯ ಪ್ರತಿನಿಧಿಯೊಬ್ಬರು ಸೋಮವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸರ್ಕಾರಿ ಮಾಧ್ಯಮಗಳ ಪ್ರಕಾರ, ಬಾವೊಗಾಂಗ್ ಯುನೈಟೆಡ್ ಸ್ಟೀಲ್ ಒಂದು ಪ್ರಮುಖ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ








