ಬಳ್ಳಾರಿ: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
BIGG NEWS: ಮಾಜಿ ಶಾಸಕನ ಸಮಾಧಿ ಧ್ವಂಸ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಗದಗಿನ ಸಂಜಯ ಬಸಪ್ಪ ಕೊಪ್ಪದ (25) ಹಾಗೂ ಬಳ್ಳಾರಿಯ ನಂದೀಶ್ (24) ಬಂಧಿತ ಆರೋಪಿಗಳು.
ಇವರು ಸಾರ್ವಜನಿಕರಿಂದ ನಾಲ್ಕು ತೊಲೆ ಬಂಗಾರ, 1,500 ರೂ. ನಗದು ಹಾಗೂ ಎರಡು ಬೈಕ್ ಸುಲಿಗೆ ಮಾಡಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ಬಂಧನಕ್ಕೆ ಡಿಎಸ್ಪಿ ಸತ್ಯನಾರಾಯಣರಾವ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ನಿರಂಜನ, ಶಾರದಾ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ