ಮೈಸೂರು : ಮೈಸೂರಿನ ಕಾವೇರಿ ನಗರದ ಬದಾಮಿನ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಮಹದೇವಪುರ ಮುಖ್ಯ ರಸ್ತೆಯ ಕಾವೇರಿ ನಗರದ ಗೋದಾಮಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಸಿಸಿಬಿ ಪೊಲೀಸರಿಂದ ಗಾಯ ಮಾರುತಿದ್ದ ಇಬ್ಬರನ್ನು ಬಂಧಿಸಿದ್ದಾರೆ 20.19 ಲಕ್ಷ ಮೌಲ್ಯದ 57 ಕೆಜಿ 700 ಗ್ರಾಂ ಮೌಲ್ಯದ ಗಾಂಜಾವನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ದುಷ್ಕರ್ಮಿಗಳು ಗೋದಾಮಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳು ತಕ್ಷಣ ಗೋದಮಿನ ಮೇಲೆ ದಾಳಿ ಮಾಡಿದ್ದಾರೆ.ಈ ವೇಳೆ ಆಸಿಮ್ ನದೀಮ್ ಸೆರೆಯಾಗಿದ್ದು ಮತ್ತೊಬ್ಬ ಆರೋಪಿ ಫರ್ಜು ಎನ್ನುವ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.