ಕೆಎನ್ಎನ್ ಡಿಜಿಟಲ್ ಡೆಸ್ಕ್ : ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ಪಡೆದ ಬಳಿಕ ಎಲಾನ್ ಮಸ್ಕ್ ಸಾಕಷ್ಟು ಹೊಸ ಹೊಸ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಮಹತ್ತರವಾದ ನಿರ್ಧಾರ ಕೈಗೊಂಡಿದ್ದು, ಟ್ವಿಟರ್ ನಲ್ಲಿ ಕೋಟಿಗಟ್ಟಲೆ ನಿಷ್ಕ್ರಿಯ ಬಳಕೆದಾರರ ಖಾತೆಗಳನ್ನು ಅಳಿಸುವುದಾಗಿ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟಿ ಮಾಡಿರುವ ಮಸ್ಕ್, ಟ್ವಿಟರ್ ಶೀಘ್ರದಲ್ಲೇ 1.5 ಬಿಲಿಯನ್ ನಿಷ್ಕ್ರಿಯ ಬಳಕೆದಾರರ ಖಾತೆಗಳನ್ನು ಮುಕ್ತಗೊಳಿಸುವ ಕೆಲಸವನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.
Twitter will soon start freeing the name space of 1.5 billion accounts
— Elon Musk (@elonmusk) December 9, 2022
ಮತ್ತೊಂದು ಟ್ವೀಟ್ನಲ್ಲಿ, ಇವು ಯಾವುದೇ ಟ್ವೀಟ್ಗಳಿಲ್ಲದ ಮತ್ತು ವರ್ಷಗಳವರೆಗೆ ಯಾವುದೇ ಲಾಗ್ ಇನ್ ಇಲ್ಲದ ಸ್ಪಷ್ಟ ಖಾತೆ ಅಳಿಸಲಾಗುವುದು ಎಂದು ಬರೆದಿದ್ದಾರೆ.
ಕೆಲ ದಿನಗಳ ವಿಡಿಯೋಗಳಂತೆಯೇ ಟ್ವೀಟ್ಗಳು ವೀಕ್ಷಣೆಯ ಸಂಖ್ಯೆಯನ್ನು ತೋರಿಸುತ್ತವೆ. ಜನರು ಯೋಚಿಸುವುದಕ್ಕಿಂತ ಟ್ವಿಟರ್ ಹೆಚ್ಚು ಜೀವಂತವಾಗಿದೆ ಎಂದು ಮಸ್ಕ್ ಹೇಳಿದ್ದರು.
ಟ್ವಿಟರ್ ಸ್ವಾಧೀನ ಪಡಿಸಿಕೊಂಡಾಗಿನಿಂದ ಎಲಾನ್ ಮಸ್ಕ್, ಮೊದಲಿಗೆ ಟ್ವಿಟರ್ ಸಿಇಒ ಸೇರಿದಂತೆ ಅನೇಕರನ್ನು ಕೆಲಸದಿಂದ ತೆಗೆದು ಹಾಕಿದರು. ಅದಾದ ನಂತರ ಹಲವು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದರು. ಈ ಮೂಲಕ ಮಸ್ಕ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.
ಇದೆಲ್ಲವುದರ ನಡುವೆ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟವನ್ನು ಕಳೆದುಕೊಂಡಿದ್ದಾರೆ.
BIGG NEWS : ದೇಶದ 50 ನಗರ & ಪಟ್ಟಣಗಳಲ್ಲಿ ಈಗ ‘5ಜಿ ಸೇವೆ’ ಲಭ್ಯ ; ಇಲ್ಲಿದೆ ಸಂಪೂರ್ಣ ಪಟ್ಟಿ |5G service