ಸ್ಯಾನ್ ಫ್ರಾನ್ಸಿಸ್ಕೋ: ಟೆಸ್ಲಾ ಸಿಇಒ ಎಲಾನ್ ಮಸ್ಕ್(Elon Musk) ಅವರು ಟ್ವಿಟರ್ (Twitter)ನ್ನು $44 ಬಿಲಿಯನ್ಗೆ ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಿದ್ದಾರೆ. ಮಸ್ಕ್ ಅವರು ಒಪ್ಪಂದದ ಮೂಲ ಬೆಲೆ $54.20 ಕ್ಕೆ ಒಪ್ಪಂದವನ್ನು ಪೂರ್ಣಗೊಳಿಸಲು ಸಿದ್ಧರಿದ್ದಾರೆ ಎಂದು ವರದಿಯಾಗಿದೆ.
ಎಲಾನ್ ಮಸ್ಕ್ ಟ್ವಿಟರ್ಗೆ ಬರೆದ ಪತ್ರದಲ್ಲಿ ಈ ಪ್ರಸ್ತಾಪ ಮಾಡಿದ್ದಾರೆ. ಈ ವರ್ಷಾರಂಭದಲ್ಲಿ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು 44 ಶತಕೋಟಿಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು. ಇದಾದ ಕೆಲವು ದಿನಗಳ ನಂತ್ರ, ನಕಲಿ ಖಾತೆಗಳ ವಿಚಾರ ಸಂಬಂಧ ಖರೀದಿ ಒಪ್ಪಂದವನ್ನು ಕೈ ಬಿಡುವುದಾಗಿ ಹೇಳಿದ್ದರು. ಆದ್ರೆ, ಈ ನಿರ್ಧಾರದ ವಿರುದ್ಧ ಟ್ವಿಟ್ಟರ್ ಕಾನೂನು ಹೋರಾಟ ನಡೆಸಿತ್ತು.
ವರದಿಯ ಪ್ರಕಾರ, ಎಲಾನ್ ಮಸ್ಕ್ ಈಗ ತಾವು ಮೊದಲು ಖರೀದಿಸಲು ನೀಡಿದ ಮೂಲ ಒಪ್ಪಂದದ ಬೆಲೆಗೆ ಅಂದ್ರೆ, ಪ್ರತಿ ಷೇರಿಗೆ 54.20 ಡಾಲರ್ಗೆ ಟ್ವಿಟ್ಟರ್ ಅನ್ನು ಖರೀದಿ ಮಾಡುವುದಾಗಿ ಟ್ವಿಟ್ಟರ್ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
Rain In Karnataka : ರಾಜ್ಯದಲ್ಲಿ ಇಂದೂ ಮುಂದುವರೆಯಲಿದ ಮಳೆ ಅಬ್ಬರ : 6 ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ