ಕೋಲಾರ : ಕೋಲಾರದಲ್ಲಿ ಅನೈತಿಕ ಸಂಬಂಧಕ್ಕೆ ಕೊಲೆ ನಡೆದಿದ್ದು ಇದೀಗ ಈ ಒಂದು ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಫೇಸ್ ಬುಕ್ ನಲ್ಲಿ ಕೊಲೆ ಮಾಡಿದ ಆರೋಪಿ ಸಂತೋಷ ಇದೀಗ ನಾನು ಕೊಲೆ ಮಾಡಿಲ್ಲ ನನ್ನ ಲೊಕೇಶನ್ ಅದಕ್ಕೆ ಸಾಕ್ಷಿ ಎಂದು ಹೇಳಿಕೆ ನೀಡಿದ್ದಾನೆ.
ಅವನು ಮಾಡಿದ ಪಾಪ ಕರ್ಮಗಳಿಗೆ ಅವನೇ ಬಲಿಯಾಗಿದ್ದಾನೆ. ನನ್ನ ಪತ್ನಿಯೊಂದಿಗೆ ನನಗೆ ಬದುಕಲು ಬಿಡಲಿಲ್ಲ ನನ್ನ ಪತ್ನಿ ಕರೆದುಕೊಂಡು ಹೋದಾಗ ಯಾರು ಸಹ ಬರಲಿಲ್ಲ. ಇವನ ಅಣ್ಣ-ತಮ್ಮಂದಿರು ಅವತ್ತು ಇನ್ನೊಬ್ಬರ ಮನೆ ಹೆಣ್ಣು ಮಕ್ಕಳು ಕರೆದುಕೊಂಡು ಓಡಿ ಹೋದಾಗ ಯಾಕೆ ನ್ಯಾಯ ಪಂಚಾಯಿತಿ ಮಾಡಲಿಲ್ಲ? ನೀನು ಇದು ಮಾಡುವುದು ತಪ್ಪು ಇನ್ನೊಬ್ಬರ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರೋದು ತಪ್ಪು. ಅವರಿಗೆ ಮಕ್ಕಳಿದ್ದಾರೆ ಸಂಸಾರ ಇದೆ ಎಂದು ನ್ಯಾಯ ಪಂಚಾಯತಿ ಮಾಡಬೇಕಾಗಿತ್ತಲ್ವಾ?
ಟೇಕಲ್ ಹತ್ರ ಯಾವುದೋ ಒಂದು ಊರಿನಲ್ಲಿ ಇವಳನ್ನು ಇಟ್ಟಿದ್ದರು. ಅವತ್ತು ಎಲ್ಲರೂ ಸಪೋರ್ಟ್ ಮಾಡಿದ್ದೀರಾ ಕರ್ಕೊಂಡು ಹೋಗಿದ್ದವನು ಹೋಗಿಬಿಟ್ಟಿದ್ದಾನೆ ಬಿಟ್ಬಿಡು ಇನ್ಮೇಲೆ ಅವಳ ದಿನ ಸ್ವಂತ ಇಲ್ಲ ಅವಳ ಸ್ವಂತ ಅಂತ ಯಾವನೋ ಒಬ್ಬ ಹೇಳಿದ್ದಾನೆ. ಮಕ್ಕಳು ಮರಿ ಅಂತ ನಾನು ಉದ್ದೇಶಪೂರ್ವಕವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿ ನನಗೂ ಅವಳು ಲವ್ ಮ್ಯಾರೇಜ್ ಆದ್ಮೇಲೆ ಬಿಟ್ ಬಿಡಬೇಕು ಅಂದರೆ ಬಿಟ್ಟುಬಿಡಬೇಕಾ? ಅವತ್ತು ಎಲ್ಲರೂ ಸೇರಿ ನನ್ನ ಮನೆ ಹಾಳು ಮಾಡಿದ್ದೀರಿ, ನನ್ನ ಮನೆ ಧ್ವಂಸ ಮಾಡಿದ್ದೀರಿ ಎಂದು ಆಳಲು ತೋಡಿಕೊಂಡಿದ್ದಾನೆ.
ಪ್ರಕರಣ ಹಿನ್ನೆಲೆ
ಕೋಲಾರದ ಕೆಂದಟ್ಟಿ ಗ್ರಾಮದಲ್ಲಿ ಯಲ್ಲೇಶ್ ಕೊಲೆಯಾಗಿದೆ.ಮೊನ್ನೆ ರಾತ್ರಿ ನರಸಾಪುರದಲ್ಲಿ ಕೊಲೆಯಾಗಿತ್ತು. ಹಾಲಿನ ಡೇರಿಯಿಂದ ವಾಪಸ್ ಆಗುವಾಗ ಬೈಕ್ ಅಡಗಟ್ಟಿ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ದುಷ್ಕರ್ಮಿಗಳು ಕಲ್ಲು ಎತ್ತು ಹಾಕಿ ಪರಾರಿ ಆಗಿದ್ದರು. ಆದರೆ ಅಕ್ರಮ ಸಂಬಂಧಕ್ಕೆ ಸಂತೋಷ್ ಕೊಲೆ ಮಾಡಿದ್ದಾನೆ ಎಂದು ಆರೋಪಗಳು ಕೇಳಿ ಬಂದಿತ್ತು.
ಹೀಗಾಗಿ ಫೇಸ್ಬುಕ್ ಲೈವ್ ಬಂದಿದ್ದ ಸಂತೋಷ್ ಆತನ ಕರ್ಮ ಆದ ಅನುಭವಿಸುತ್ತಾನೆ ನನ್ನ ಲೋಕೇಶನ್ ಅನು ಚೆಕ್ ಮಾಡಿ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಹಿಂದೆ ಆಕ್ರಮ ಸಂಬಂಧ ವಿಚಾರದಲ್ಲಿ ನಾಯಪಂಚಾಯಿತಿ ಮಾಡಬೇಕಾಗಿತ್ತು ಅದನ್ನು ಊರಿನ ಹಿರಿಯರು ಯಾರು ಮಾಡಲಿಲ್ಲ ಇದೀಗ ಅವರ ಪಾಪ ಕರ್ಮಗಳನ್ನು ಅವನೇ ಅನುಭವಿಸುತ್ತಿದ್ದಾನೆ ಅಂತ ಸಂತೋಷ್ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾನೆ.








