ಇಸ್ತಾಂಬುಲ್: ಟರ್ಕಿಯ ರಾಜಧಾನಿ ಇಸ್ತಾಂಬುಲ್ನಲ್ಲಿ ನಿನ್ನೆ ಸಂಭವಿಸಿದ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೆ ನಂತರ ಬಾಂಬ್ ಸ್ಫೋಟದ ಶಂಕಿತನನ್ನು ಅಧಿಕಾರಿಗಳು ಕಸ್ಟಡಿಗೆ ತೆಗೆದಕೊಂಡಿದ್ದಾರೆ ಎಂದು ತಳಿದು ಬಂದಿದೆ.
SHOCKING NEWS: ಎನರ್ಜಿ ಮಾತ್ರೆ ಸೇವಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ದುರುಳ, ಸಂತ್ರಸ್ತೆ ಸಾವು
ಬಾಂಬ್ ಸ್ಫೋಟ್ಕೆ ಕಾರಣನಾದ ವ್ಯಕ್ತಿಯನ್ನು ಸೋಮವಾರ ಇಸ್ತಾಂಬುಲ್ನ ಇಸ್ತಿಕ್ಲಾಲ್ ಸ್ಟ್ರೀಟ್ನಲ್ಲಿ ಕಸ್ಟಡಿಎ ತೆಗೆದುಕೊಳ್ಳಲಾಗಿದೆ. ಈ ಬಾಂಬ್ ದಾಳಿಗೆ ಭಯೋತ್ಪಾದಕ ಸಂಘಟನೆಯು (ಪಿಕೆಕೆ) ಹೊಣೆಯಾಗಿದೆ ಎಂದು ಟರ್ಕಿಯ ಆಂತರಿಕ ಮಂತ್ರಿ ಸುಲೇಮಾನ್ ಸೊಯ್ಲು ಹೇಳಿದ್ದಾರೆ.
ಆದರೆ ಇಲ್ಲಿಯವರೆಗೆ, ದಾಳಿಯ ಹೊಣೆಯನ್ನು ಅನ್ನು ಯಾರೂ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.
ಈ ಹಿಂದೆ, ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಅವರು ಬಾಂಬ್ ದಾಳಿಯು ಭಯೋತ್ಪಾದನೆಯ ವಾಸನೆಯನ್ನು ಹೊಂದಿದೆ ಎಂದು ಎಚ್ಚರಿಸಿದ್ದರು.
#UPDATE The person who planted the bomb in Istanbul that killed at least six people has been arrested, Interior Minister Suleyman Soylu tells the Anadolu news agency.
President Recep Tayyip Erdogan had earlier said that "a woman" was responsible for the attack pic.twitter.com/wUoSwitlKl
— AFP News Agency (@AFP) November 14, 2022
ಭಾನುವಾರ ಇಸ್ತಾಂಬುಲ್ನ ಪಾದಚಾರಿ ಸ್ಟ್ರೀಟ್ ನಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸತ್ತು. ಘಟನೆಯಲ್ಲಿ, ಆರು ಸಾವುಗಳು ಮತ್ತು 81 ಮಂದಿ ಗಾಯಗೊಂಡಿದ್ದಾರೆ.
ಉಕ್ರೇನ್, ಬ್ರಿಟನ್, ಇಟಲಿ, ಈಜಿಪ್ಟ್ ಮತ್ತು ಗ್ರೀಸ್ ಸೇರಿದಂತೆ ಹಲವಾರು ದೇಶಗಳು ಘಟನೆಗೆ ಆಕ್ರೋಶ ಮತ್ತು ಸಂತ್ರಸ್ತರಿಗೆ ಸಹಾನುಭೂತಿಯ ಸಂದೇಶಗಳನ್ನು ಕಳುಹಿಸಿವೆ.
ಡಿಸೆಂಬರ್ 2016 ರಲ್ಲಿ, ಇಸ್ತಾಂಬುಲ್ನ ಸಾಕರ್ ಸ್ಟೇಡಿಯಂನಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರ ಪರಿಣಾಮವಾಗಿ 38 ಸಾವುಗಳು ಮತ್ತು 155 ಮಂದಿ ಗಾಯಗೊಂಡಿದ್ದರು. ನಂತರ, ಟರ್ಕಿ, ಯುಎಸ್ ಮತ್ತು ಯುರೋಪಿಯನ್ ಯೂನಿಯನ್ (ಇಯು) ನಿಂದ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾದ ಪಿಕೆಕೆ ಬಣವು ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ಹಿಜಾಬ್ ವಿರೋಧಿ ಪ್ರತಿಭಟನೆಗಳ ನಡುವೆ ಮೊದಲ ಮರಣದಂಡನೆಯನ್ನು ನೀಡಿದ ಇರಾನ್