ತುಮಕೂರು : ಕೈಗಾರಿಕಾ ಪ್ರದೇಶಕ್ಕೆ ಸೇರ್ಪಡೆಗೊಂಡಂತಹ ಜಮೀನೀನ ಕೆಐಎಡಿಬಿಯ ಪರಿಹಾರದ ಹಣ ಹೊಡೆಯಲು ಬದುಕಿರುವವರನ್ನು ಸತ್ತಿದ್ದಾನೆ ಎಂದು ತಿಥಿ ಕಾರ್ಡ್ ತಯಾರಿಸಿ ಕೋಟ್ಯಂತರ ಹಣ ಲಪಟಾಯಿಸಲು ಕುಟುಂಬವೊಂದು ಬಿಗ್ ಪ್ಲಾನ್ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಹೌದು ಬದುಕಿದ್ದ ವ್ಯಕ್ತಿಯು ಸತ್ತಿದ್ದಾನೆ ಎಂದು ತಿಥಿ ಕಾರ್ಡ್ ಹೊಡೆಸಿ ಜಮೀನನ್ನು ಸಂಬಂಧಿಕರೇ ಗೋಲ್ಮಾಲ್ ಮಾಡಿದ್ದಾರೆ.ಸೋರೆಕುಂಟೆ ಗ್ರಾಮದ ಸರ್ವೆ ನಂಬರ್ 41/44ರಲ್ಲಿರುವ ನಾಲ್ಕು ಎಕರೆ ಜಮೀನನ್ನು ತುಮಕೂರಿನ ಹಿಂದಿನ ತಾಶಿಲ್ದಾರ್ ಸಿದ್ದೇಶ್ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಈ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಬಸರಿಹಳ್ಳಿ ಗ್ರಾಮದ ಬಸವರಾಜು ಬಿನ್ ಲೇಟ್ ಮಲ್ಲಯ್ಯಗೆ ಸೇರಿದ ಜಮೀನು ಎಂದು ಹೇಳಲಾಗುತ್ತಿದ್ದು,ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಸರಿ ಹಳ್ಳಿಯ ನಿವಾಸಿ ಬಸವರಾಜು 1977 ಮತ್ತು 78 ರಲ್ಲಿ ಬಸವರಾಜು ಎಂಬವರಿಗೆ ಸಾಗುವಳಿ ಮಂಜೂರು ಮಾಡಲಾಗಿತ್ತು. 97ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಖಾತೆ ಬದಲಾಯಿಸಿರುವ ಸಂಬಂಧಿ ನಂಜಯ್ಯ, ನಕಲಿ ದಾಖಲೆ ಸೃಷ್ಟಿಸಿರುವ ನಂಜಯ್ಯ ಮೂಲ ಜಮೀನು ಮಾಲೀಕನ ಸಂಬಂಧಿ ಎಂದು ಹೇಳಲಾಗುತ್ತಿದೆ.
ಜಮೀನಿನ ಪರಿಹಾರದ ಹಣ ಲಪಟಾಯಿಸಲು ನಂಜಯ್ಯ ನಕಲಿ ಬಸವರಾಜಯ್ಯನನ್ನು ಸೃಷ್ಟಿ ಮಾಡಿದ್ದಾನೆ. ನಂಜಯ್ಯ ಕುಟುಂಬ ತುಮಕೂರು ತಾಲೂಕಿನ ಬೊಮ್ಮೇಗೌಡನ ಪಾಳ್ಯದ ನಿವಾಸಿ ಎಂದು ಹೇಳಲಾಗುತ್ತಿದೆ. ಆರೋಪಿ ನಂಜಯ್ಯ ಹಾಗೂ ಬಸವರಾಜು ಜಮೀನು ಅಕ್ಕ ಪಕ್ಕದಲ್ಲಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದ ನಕಲಿ ದಾಖಲಿ ಸೃಷ್ಟಿಸಿ ಗೋಲ್ಮಾಲ್ ಮಾಡಿದ್ದಾರೆ. 41/44 ಸರ್ವೇ ನಂಬರನ್ನು 44p1 ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ.
ನಮ್ಮ ಮನೆತನದಲ್ಲಿ ಬಸವರಾಜು ಇದ್ದ ಎಂದು ನಕಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ. ಮೂಲ ಜಮೀನು ಮಾಲಿಕ ಬಸವರಾಜು ಬದುಕಿದ್ದರು ಆತನ ತಿಥಿ ಕಾರ್ಡ್ ಸೃಷ್ಟಿಸಿದ್ದಾರೆ.ನಂಜಯ್ಯನ ಕುಟುಂಬ ಬದುಕಿರೋರನ್ನ ಸಾಯಿಸಿ ತಿಥಿ ಕಾರ್ಡ್ ಹೊಡೆಸಿದ್ದಾರೆ. ನಾನು ಬದುಕಿದ್ದರೂ ಸಾಯಿಸಿ ಹಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂದು ರೈತ ಬಸವರಾಜು ಅಳಲು ತೋಡಿಕೊಂಡಿದ್ದಾನೆ. ನಂಜಯ್ಯ ಮಕ್ಕಳರಿಂದ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಕೇಳಿ ಬಂದಿದೆ. ಜಮೀನಿನ ಮೂಲ ವಾರಸುದಾರ ಬಸವರಾಜ್ ಅವರಿಂದ ಗಂಭೀರವಾದ ಆರೋಪ ಕೇಳಿ ಬಂದಿದೆ.
ಎಕರೆಗೆ 30 ಲಕ್ಷದಂತೆ ಒಟ್ಟು 1 ಕೋಟಿ 20 ಲಕ್ಷ ಹಣ ಹೊಡೆಯಲು ಪ್ಲಾನ್ ಮಾಡಿದ್ದರು ಎನ್ನಲಾಗುತ್ತಿದೆ.ಈ ಹಿಂದೆ ತುಮಕೂರಿನಲ್ಲಿ ತಹಶೀಲ್ದಾರ್ ಹಾಕಿದ್ದ ಸಿದ್ದೇಶ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಶಾಮಿಲು ಆಗಿ ಈ ಒಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಬಸವರಾಜು ಆರೋಪಿಸಿದ್ದಾರೆ. ಶಾಲಾ ದಾಖಲಾತಿ ಸೇರಿದಂತೆ ಹಲವು ನಕಲಿ ದಾಖಲೆ ಸೃಷ್ಟಿಸಿ ವಂಚಿಸಲು ಪ್ಲಾನ್ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿ 48ಕ್ಕೆ ಈ ಒಂದು ನಾಲ್ಕು ಎಕರೆ ಜಮೀನು ಹೊಂದಿಕೊಂಡಿದೆ ಸದ್ಯ ನ್ಯಾಯಕ್ಕಾಗಿ ಮೂಲ ಜಮೀನುದಾರರು ಪರದಾಡುತ್ತಿದ್ದಾರೆ.