ತುಮಕೂರು : ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಮೂವರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಮೂವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದವರು ಎಂದು ತಿಳಿದು ಬಂದಿದ್ದು, ಇಸಾಕ್(56), ಸಾಹುಲ್(45) ಹಾಗೂ ಇಮ್ತಿಯಾಜ್(34) ಮೃತರು ಎಂದು ಹೇಳಲಾಗುತ್ತಿದೆ.
‘ಸಿಎಂ’ ಬದಲಾವಣೆ ಬಗ್ಗೆ ಗುಬ್ಬಿ ಶಾಸಕ ಶ್ರೀನಿವಾಸ್ ಹೇಳಿಕೆ ವಿಚಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?
ಮೃತರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ತುಮಕೂರಿಗೆ ಬಂದಿದ್ದ ಮೂವರು, ಜಮೀನಿನಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಅಂತ ಆರೋಪಿಗಳು ನಂಬಿಸಿದ್ದರು.ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ಆರೋಪಿಗಳು ಕರೆಸಿಕೊಂಡಿದ್ದರು ಎನ್ನಲಾಗಿದೆ.
ಚಿನ್ನ ಖರೀದಿಗೆ ತಂದಿದ್ದ ಹಣ ದೋಚಲು ಆರೋಪಿಗಳು ಮೂವರನ್ನು ಕೊಂದಿದ್ದಾರೆ. ನಕಲಿ ಚಿನ್ನ ತೋರಿಸಿ ಹಣ ದೋಚಲು ಆರೋಪಿಗಳು ಇದೀಗ ಮೂವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಣ ದೋಚುವ ವೇಳೆ ಮೂವರ ಮೇಲೆ ಆರೋಪಿಗಳು ಹಲ್ಲೆ ಮಾಡಿ ಕೈಕಾಲು ಕಟ್ಟಿ ಕಾರಿನಲ್ಲಿ ಹಾಕಿದ್ದಾರೆ.ನಂತರ ಬೆಂಕಿ ಹಚ್ಚಿದ್ದಾರೆ. ಕಾರಿನ ಡಿಕ್ಕಿಯಲ್ಲಿ ಇಬ್ಬರ ಮೃತ ದೇಹ ಮಧ್ಯ ಭಾಗದಲ್ಲಿ ಒಬ್ಬನ ಮೃತ ದೇಹ ಹೀಗೆ ಕಾರಿನಲ್ಲಿ ಮೂರು ಮೃತದೇಹಗಳನ್ನ ಇಟ್ಟು ಆರೋಪಿಗಳು ಬೆಂಕಿ ಹಚ್ಚಿದ್ದಾರೆ. ಗುರುತು ಪತ್ತೆಹಚ್ಚಲು ಆಗದ ಸ್ಥಿತಿಯಲ್ಲಿ ಆರೋಪಿಗಳು ಮೂರನ್ನು ಸುಟ್ಟು ಹಾಕಿದ್ದರು.
ಕೊಲೆಯಾಗಿದ್ದ ಇಸಾಕ್ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ. ಡೀಲ್ ಇದೆ ಬಾ ಅಂತ ಇಸಾಕ ಸ್ನೇಹಿತನ ಕಾರು ಪಡೆದುಕೊಂಡಿದ್ದ ಎನ್ನಲಾಗಿದೆ.ಅಲ್ಲದೆ ಆತನ ಜೊತೆಗೆ ಸಾಹುಲ್ ಅಮಿತ್ ಮತ್ತು ಇಮ್ತಿಯಾಜ್ ಅನ್ನು ಕೂಡ ಇಸ ಕರೆತಂದಿದ್ದ ಎನ್ನಲಾಗುತ್ತಿದೆ. ತುಮಕೂರು ಮೂಲದ ಸ್ವಾಮಿ ಎಂಬಾತನ ಪರಿಚಯದ ಮೂಲಕ ಬಂದಿದ್ದರು ಎನ್ನಲಾಗಿದೆ.
ಕಳೆದ 11 ದಿನಗಳ ಹಿಂದೆ ಈ ಮೂವರು ತುಮಕೂರಿಗೆ ಬಂದಾಗ ಕೊಲೆಯಾಗಿದ್ದಾರೆ ಗುರುವಾರ ಸಂಜೆಯವರೆಗೂ ಇಸಾಕ್ ಕುಟುಂಬಸ್ಥರ ಹೃದಯ ಸಂಪರ್ಕದಲ್ಲಿದ್ದ ಎನ್ನಲಾಗುತ್ತಿದೆ.ಕೊಲೆಯಾದ ಇಸಾಕ್ ಮೊಬೈಲ್ ಗುರುವಾರ ರಾತ್ರಿ ಸ್ವಿಚ್ ಆಫ್ ಆಗಿತ್ತು. ಘಟನಾ ಸ್ಥಳದಲ್ಲಿದ್ದ ಕಾರಿನ ನಂಬರ ಆಧರಿಸಿ ಕಾರು ಮಾಲೀಕನನ್ನು ಸಂಪರ್ಕ ಮಾಡಲಾಗಿದೆ. ಇಸಾಕ್ಗೆ 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ಮಾಲೀಕ ರಫೀಕ್ ಹೇಳಿಕೆ ನೀಡಿದ್ದಾನೆ.ಇದೀಗ ಎ1 ಆರೋಪಿ ಸ್ವಾಮಿ ಸೇರಿದಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
‘ಸಿಂಧೂರ’ ಧರಿಸುವುದು ಹಿಂದೂ ಮಹಿಳೆಯ ‘ಧಾರ್ಮಿಕ ಕರ್ತವ್ಯ’ವಾಗಿದೆ : ಕೋರ್ಟ್ ಮಹತ್ವದ ಅಭಿಪ್ರಾಯ