ತುಮಕೂರು : ಅಧಿಕಾರಿಗಳು ಸರ್ಕಾರಿ ಜಮೀನು ಒತ್ತುವರಿಗೆ ಬಂದ ಹಿನ್ನೆಲೆಯಲ್ಲಿ ರೈತನೊಬ್ಬ ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ನಗರದ ಕಲ್ಲುಕೋಟೆಯಲ್ಲಿ ಈ ಒಂದು ಘಟನೆ ನಡೆದಿದೆ.
ಕಾಂತರಾಜು ಎನ್ನುವ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುಮಾರು 60-70 ವರ್ಷಗಳಿಂದ ಕಾಂತರಾಜು ಉಳುಮೆ ಮಾಡುತ್ತಿದ್ದ. ಸರ್ವೇ ನಂಬರ್ 118 ರಲ್ಲಿ ಕಾಂತರಾಜು ಉಳುಮೆ ಮಾಡುತ್ತಿದ್ದಾರೆ. ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ನಗರ ಸಭೆಯ ಅಧಿಕಾರಿಗಳು ಬಂದಿದ್ದರು.
ಈ ವೇಳೆ ನೋಟಿಸ್ ನೀಡದೆ ಏಕಾಏಕಿ ತೆರವುಗೊಳಿಸಲು ಬಂದಿದ್ದಕ್ಕೆ ಕಾಂತರಾಜು ವಿಷ ಸೇವಿಸಿ ಮಾತೆಗೆ ಯತ್ನಿಸಿದ್ದಾರೆ.ಜಮೀನಿನಲ್ಲಿ ರೈತ ಕಾಂತರಾಜು ಆತ್ಮಹತ್ಯೆಗೆ ಯತ್ನಿಸಿದ್ದಾರೆ ತಕ್ಷಣ ಕಾಂತರಾಜುವನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.